ಬಿದ್ದು ಸಿಕ್ಕಿದ ಚಿನ್ನದ ಬ್ರೆಸ್ ಲೆಟ್ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಬೀರ್ ಕಟ್ಟೆಕಾರ್

0

ತನ್ನ ಅಂಗಡಿಯ ಎದುರು ಬಿದ್ದು ಸಿಕ್ಕಿದ ಚಿನ್ನದ ಬ್ರೆಸ್ ಲೆಟ್ ನ್ನು ಸುಳ್ಯದ ಕಟ್ಟೆಕಾರ್ ಹಾರ್ಡ್ ವೇರ್ ಮಾಲಕ ಕಬೀರ್ ಕಟ್ಟೆಕಾರ್ ರವರು
ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಪೇರಾಲಿನ ಶ್ರೀಧರ ಆಚಾರ್ಯ ಎಂಬವರು ಸುಳ್ಯ ಸಿ.ಎ.ಬ್ಯಾಂಕ್ ನಲ್ಲಿ ಅಡವಿರಿಸಿದ ಸುಮಾರು ಮುಕ್ಕಾಲು ಪವನಿನ ಬ್ರೆಸ್ ಲೆಟ್ ಬಿಡಿಸಿ ಅದನ್ನು ಕಿಸೆಯಲ್ಲಿ ಹಾಕಿದರು. ಸುಳ್ಯ ಪೇಟೆಯಲ್ಲಿ ವ್ಯವಹಾರ ನಡೆಸಿ ಮನೆಗೆ ಹೋಗಿ ನೋಡುವಾಗ ಬ್ರೆಸ್ ಲೆಟ್ ಇರಲಿಲ್ಲವೆನ್ನಲಾಗಿದೆ. ಸುಳ್ಯದಲ್ಲಿ ವ್ಯವಹಾರ ನಡೆಸುತ್ತಿದ್ದ ಸಂದರ್ಭ ಕಟ್ಟೆಕಾರ್ ಹಾರ್ಡ್ವೇರ್ ನಲ್ಲಿ ಸಾಮಾಗ್ರಿ ಖರೀದಿಸಲು ಹೋಗಿದ್ದ ಸಂದರ್ಭ ಬ್ರೇಸ್ ಲೇಟ್ ಅನ್ನು ಅಲ್ಲಿ ಕಳೆದುಕೊಂಡಿದ್ದರು. ಈ ಬಗ್ಗೆ ಮಾಲಿಕ ಕಬೀರ್ ಕಟ್ಟೆಕಾರ್ ರವರಿಗೆ ಅದು ಸಿಕ್ಕಿತೆನ್ನಲಾಗಿದೆ. ಅದನ್ನು ಅವರು ಪ್ರಾಮಾಣಿಕತೆಯಿಂದ ಶ್ರೀಧರ ಆಚಾರ್ಯರಿಗೆ ಕೊಟ್ಟಿದ್ದಾರೆ.