ಜನರೇಟರ್ ನ ಮೇಲೆ ಶೀಟು ಅಳವಡಿಕೆ ಮಾಡುತ್ತಿದ್ದ ಸಂದರ್ಭ ಪಕ್ಕದಲ್ಲಿದ್ದ ಟಿಸಿ ಯ ವಯರ್ ಸ್ಪರ್ಶಿಸಿ ಯುವಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.









ಸುಳ್ಯ ಸಿ.ಎ. ಬ್ಯಾಂಕ್ ನ ಹಿಂಬದಿ ಜನರೇಟರ್ ಗೆ ಶೀಟು ಅಳವಡಿಕೆ ಕಾರ್ಯ ನಡೆಯುತಿತ್ತು. ಕೆಲಸ ನಿರ್ವಹಿಸುತ್ತಿದ್ದ ಕಿರಣ ಎಂಬ ಯುವಕ ಪಕ್ಕದಲ್ಲಿದ್ದ 11 ಕೆ.ವಿ. ಟಿಸಿಯ ಮೇಲಿನ ಸಿಮೆಂಟ್ ಪಿಲ್ಲರ್ ಮೇಲೆ ನಿಂತು ಶೀಟು ಅಳವಡಿಸಿದ್ದನೆಂದೂ, ಈ ವೇಳೆ ವಯರ್ ತಾಗಿ ಆತನಿಗೆ ಶಾಕ್ ಹೊಡೆಯಿತು. ಅಲ್ಲೇ ಬಿದ್ದ ಆತನನ್ನು ಇತರ ಕೆಲಸ ಗಾರರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.










