ಭಟ್ಕಳದಿಂದ ಸುಳ್ಯ ಠಾಣೆಗೆ ಕರೆ ತಂದು ವಿಚಾರಣೆ
ಏ ೫ ರಂದು ಸಂಪಾಜೆ ಕಡೆಯಿಂದ ಸುಳ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಏಳು ಮಂದಿ ಯುವಕರು ಕಾರಿನ ಮೇಲೆ ಕುಳಿತು ಹುಚ್ಚಾಟ ಮೆರೆದ ಘಟನೆ ರಾಜ್ಯ ಮಟ್ಟದಲ್ಲಿ ವರದಿಯಾಗಿತ್ತು.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿ, ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ಯುವಕರ ಪತ್ತೆಗಾಗಿ ಹುಡುಕಾಟವನ್ನು ಆರಂಭಿಸಿದ್ದರು.









ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆಯಲ್ಲಿ ಭಾಗಿಯಾಗಿದ್ದ ಭಟ್ಕಳ ಮೂಲದ ಸಾಝಿಲ್, ಆತಿಫ್,ಸಮನ್, ಶೈಬಾಜ್ ಹಸ್ಸನ್ ಎಂಬ ೬ ಮಂದಿ ಯುವಕರನ್ನು ಭಟ್ಕಳದಿಂದ ಸುಳ್ಯಕ್ಕೆ ಕರೆತಂದಿದ್ದು ವಿಚಾರಣೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಏಳು ಮಂದಿಯ ಪೈಕಿ ಓರ್ವ ಆರೋಪಿ ಸಾಜೀಬ್ ಎಂಬಾತ ಪೊಲೀಸರ ಕೈಗೆ ಸಿಗದೇ ಬೇರೆ ಊರಿಗೆ ತೆರಳಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.










