12 ಮಂದಿ ಸಹಕಾರಿ ಭಾರತಿಯ ಸದಸ್ಯರು ನಿರ್ದೇಶಕರಾಗಿ ಅಧಿಕಾರ
ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಸೊಸೈಟಿಯ ಚುನಾವಣಾ ಫಲಿತಾಂಶ ಘೋಷಿಸಲು ಕೋರ್ಟ್ ಸೂಚನೆ ಮೇರೆಗೆ ಇಂದು ಅಧಿಕೃತ ಫಲಿತಾಂಶ ಘೋಷಣೆ ನಡೆಯಿತು.










ಕೊಲ್ಲಮೊಗ್ರು ಹರಿಹರ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ಅಧಿಕ ಮತಗಳಿಂದ ಆಯ್ಕೆಯಾದ ನಿರ್ದೇಶಕರುಳಾದ ಗಣೇಶ್ ಭಟ್ ಇಡ್ಯಡ್ಕ, ಶೇಷಪ್ಪ ಗೌಡ ಕಿರಿಭಾಗ, ಡಾl ಸೋಮಶೇಖರ ಕಟ್ಟೆಮನೆ, ಹಿಮ್ಮತ್ ಕೆ.ಸಿ, ಡ್ಯಾನಿ ಯಲದಾಳು, ರೇಗನ್ ಶೆಟ್ಯಡ್ಕ, ಕಮಲಾಕ್ಷ ಮುಳ್ಳುಬಾಗಿಲು, ಗೋಪಾಲಕೃಷ್ಣ, ಬೊಳಿಯ ಅಜಿಲ, ಮಹಾಲಿಂಗ ನಾಯ್ಕ, ವೇದಾವತಿ ಮುಳ್ಳುಬಾಗಿಲು, ಮೇನಕ ಕೊಪ್ಪಡ್ಕ ಇವರನ್ನು ಅಧಿಕೃತವಾಗಿ ನಿರ್ದೇಶಕರಾಗಿ ಘೋಷಿಸಲಾಯಿತು. ಆರಂಭದಲ್ಲಿ
ಸ್ಪರ್ಧಾ ಕಣದಲ್ಲಿದ್ದ ಎಲ್ಲರ ಮತಗಳನ್ನು ಓದಿ ಹೇಳಲಾಯಿತು.
ರಿಟರ್ನಿಂಗ್ ಅಫೀಸರ್ ಶಿವಲಿಂಗಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಉಪಸ್ಥಿತರಿದ್ದರು.










