ರೆಂಬೆಗಳನ್ನು ತೆರೆವುಗೊಳಿಸಿ ಕೊಡುವಂತೆ ಸ್ಥಳೀಯರಿಂದ ಮನವಿ

ನಾವೂರಿನಿಂದ ಕಾಯರ್ತ್ತೋಡಿ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಅಪಾಯಕಾರಿ ಮರಗಳು ಇದ್ದು ಕಳೆದ ಎರಡು ದಿನಗಳ ಹಿಂದೆ ಬಂದ ಭಾರಿ ಗಾಳಿ ಮಳೆಗೆ ಮರದ ಕೆಲವು ರೆಂಬೆಗಳು ತುಂಡಾಗಿ ಬಿದ್ದಿವೆ.









ಉಳಿದಂತೆ ಇನ್ನಿತರ ಮರಗಳು ಕೂಡ ಅಪಾಯಕಾರಿ ಸ್ಥಿತಿಯಲ್ಲಿದ್ದು ಈ ಮರದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗುತಿದ್ದು ನೂರಾರು ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದಾಡುತ್ತಿರುತ್ತಾರೆ. ಆದ್ದರಿಂದ ಅಪಾಯಕಾರಿ ಮರಗಳ ರೆಂಬೆಗಳನ್ನು ತೆರೆವುಗೊಳಿಸಿ ಮುಂದೆ ಉಂಟಾಗ ಬಹುದಾದ ಅನಾಹುತವನ್ನು ತಪ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.










