ನಿಂತಿಕಲ್ಲಿನಿಂದ ಡಾಮರೀಕರಣ ಕೆಲಸ ಪ್ರಗತಿಯಲ್ಲಿ










ನಿಂತಕಲಿನಿಂದ ಬೆಳ್ಳಾರೆ ರಸ್ತೆ 372 ಲಕ್ಷದಲ್ಲಿ ಅಭಿವೃದ್ಧಿ ಗೊಳ್ಳುತಿದ್ದು ಏ. 15 ರಂದು ಸಂಸದರಾದ ಬ್ರಿಜೇಶ್ ಚೌಟಾ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಕಾಮಗಾರಿಗೆ ಚಾಲನೆ ನೀಡಿದ್ದರು. ಇದಾಗಿ ಮರದಿನದಿಂದಲೇ ಕೆಲಸ ಆರಂಭಗೊಂಡಿದೆ.
ಏ 16 ರಿಂದಲೇ ನಿಂತಿಕಲ್ಲಿನಿಂದ ಡಾಮರೀಕರಣ ಆರಂಭಗೊಂಡಿದ್ದು ಸುಮಾರು ಒಂದು ಕಿ.ಮೀ ಡಾಮರೀಕರಣಗೊಂಡಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತಷ್ಟು ಖುಷಿಯಾಗಿದ್ದಾರೆ.










