ಜೂನ್-1: ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ನೇತೃತ್ವದಲ್ಲಿ ಪುತ್ತೂರಿನಲ್ಲಿ ಸರ್ವಸದಸ್ಯರುಗಳ ಮಹಾಅಧಿವೇಶನ

0

ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ(ರಿ)ವೂ 2024 ಆಗಸ್ಟ್ 30 ರಂದು ಅಸ್ತಿತ್ವಕ್ಕೆ ಬಂದಿದ್ದು, ಸಂಸ್ಥೆಯ ಧೈಯ ಉದ್ದೇಶಕ್ಕೊಳಪಟ್ಟಂತೆ ಹತ್ತು ಕುಟುಂಬ – ಹದಿನೆಂಟು ಗೋತ್ರಗೊಳಪಡುವ, ಆಚಾರ-ಸಂಪ್ರದಾಯಗಳಿಗೆ ಬದ್ಧರಾಗಿರುವ ಗೌಡರ ಯಾನೆ ಒಕ್ಕಲಿಗರ ಸಮುದಾಯದ ಸಂಘಟನೆಯಾಗಿರುತ್ತದೆ.

ಪ್ರಸ್ತುತ ಜಿಲ್ಲಾ ಅಧ್ಯಕ್ಷರಾದ ಲೋಕಯ್ಯ ಗೌಡರವರ ಅಧ್ಯಕ್ಷತೆಯಲ್ಲಿ ಮಾರ್ಚ್ 30 ರಂದು ಪುತ್ತೂರಿನ ಮಾಧುರಿ ಸೌಧದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಜೂನ್-1 ರಂದು ಪುತ್ತೂರಿನ ತೆಂಕಿಲದ ಒಕ್ಕಲಿಗ ಸಭಾಭವನದಲ್ಲಿ ಜಿಲ್ಲಾ ಮಾತೃ ಸಂಘದ ಸರ್ವಸದಸ್ಯರುಗಳ ಮಹಾಅಧಿವೇಶನವನ್ನು ನಡೆಸುವುದು ಮತ್ತು ಈ ಕಾರ್ಯಕ್ರಮದಲ್ಲಿ ಸಮಾಜಮುಖ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತೀರ್ಮಾನಿಸಿದೆ ಹಾಗೂ ಜಿಲ್ಲಾ ಮಾತೃ ಸಂಘಕ್ಕೆ ಸದಸ್ಯರಾಗ ಬಯಸುವವರು ಸಂಘದ ಆಯಾಯ ತಾಲೂಕಿನ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಲೋಕಯ್ಯ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿಕೊಂಡಿರುತ್ತಾರೆ.