ಸಂಚಾಲಕರಾಗಿ ಹಸೈನಾರ್ ಜಯನಗರ ಆಯ್ಕೆ
ದ. ಕ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಪಡಿ ಸಂಸ್ಥೆ ವತಿಯಿಂದ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯ ಪಡೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಸುಳ್ಯ ತಾಲೂಕು ಕಾರ್ಯ ಪಡೆ ರಚನೆಯ ಬಗ್ಗೆ ಸಭೆ ಏ. 22 ರಂದು ಸುಳ್ಯದಲ್ಲಿ ನಡೆಯಿತು.
ದ. ಕ.ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರಾದ ಅಡ್ವಕೆಟ್ ಅಬೂಬಕ್ಕರ್ ಅಡ್ಕಾರ್ ರವರ ಕಚೇರಿಯಲ್ಲಿ ಸಭೆ ನಡೆದು ಕಾರ್ಯಪಡೆಯ ಬಗ್ಗೆ ಹಾಗೂ ಯೋಜನೆಯ ಕುರಿತು ಮಂಗಳೂರು ಪಡಿ ಸಂಸ್ಥೆಯ ಸಂಯೋಜಕಿ ಶ್ರೀಮತಿ ಕಸ್ತೂರಿ ಬೋಳುವಾರು ರವರು ಮಾಹಿತಿ ನೀಡಿ ಸಮಾಜದಲ್ಲಿ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಅದರಲ್ಲೂ ಬದುಕು ಕಟ್ಟಿ ಕೊಳ್ಳಲು ಅಲೆಮಾರಿ ಜೀವನ ನಡೆಸುವ ಸಮುದಾಯದಲ್ಲಿ ಹೆಚ್ಚಾಗಿ ಈ ಸಮಸ್ಯೆಗಳು ಕಾಣುತ್ತಿದ್ದು ಅಂತಹ ಸಂಧರ್ಭದಲ್ಲಿ ನಮ್ಮ ಕಾರ್ಯಪಡೆ ಅವರ ಜವಾಬ್ದಾರಿಯನ್ನು ಪಾಲಿಸಿ ಆ ಮಕ್ಕಳ ಪೋಷಕರನ್ನು ಜಾಗೃತಿ ಗೊಳಿಸುವ ಮತ್ತು ಮಕ್ಕಳಿಗೆ ಶಿಕ್ಷಣ ಮತ್ತು ಅವರ ಹಕ್ಕುಗಳು ಲಭಿಸಲು ಸಂಭಂದ ಪಟ್ಟವರ ಗಮನಕ್ಕೆ ತರುವ ಕೆಲಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಮಾಹಿತಿ ನೀಡಿದರು.















ಮಕ್ಕಳ ರಕ್ಷಣಾ ಸಮಿತಿಯ ದ. ಕ ಜಿಲ್ಲಾ ಸದಸ್ಯ ನ್ಯಾಯವಾದಿ ಅಬೂಬಕ್ಕರ್ ರವರು ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಬಳಿಕ ತಾಲೂಕು ಕಾರ್ಯ ಪಡೆಯ ಸಂಯೋಜಕರಾಗಿ ಹಸೈನಾರ್ ಜಯನಗರ ರವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಿಕ್ಷಣ ಸಂಪನ್ಮೂಲ ಕೇಂದ್ರ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಂಕರ್ ಪೆರಾಜೆಯವರು ವಹಿಸಿದ್ದರು.
ತಾಲೂಕು ಸಮಿತಿ ಕಾರ್ಯದರ್ಶಿ ಮೋನಪ್ಪ ಕೊಳಗೆ,ಸದಸ್ಯರುಗಳಾದ ನಝೀರ್ ಶಾಂತಿನಗರ,ಅಶೋಕ್ ಪೀಚೆ, ಆಯೇಷಾ ಜಾಲ್ಸೂರು, ಶ್ರೀಮತಿ ಕಾಂತಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಸದಸ್ಯ ತರಬೇತುದಾರರಾದ ನಾರಾಯಣ ಕಿಲಂಗೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.










