ರಾಷ್ಟ್ರ ಅಭಿಮಾನಿ ಬಳಗ ದ ಕ ಸಂಪಾಜೆ ಇದರ ವತಿಯಿಂದ ಜಮ್ಮು ಕಾಶ್ಮೀರದ ಪಹಲ್ ಗಾಂವ್ ಉಗ್ರರ ಪೈಚಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆ ಮತ್ತು ಮಡಿದವರಿಗೆ ಶೋಕ ಆಚರಣೆ ಕಾರ್ಯಕ್ರಮವು ಏ.24 ರಂದು ಕಲ್ಲುಗುಂಡಿ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ನಡೆಯಿತು.
















ಮನಿಷ್ ಗೂನಡ್ಕ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಬಳಿಕ ಮಾಜಿ ಸೈನಿಕ ಹಾಗೂ ಗ್ರಾಮ ಪಂಚಾಯತ್ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ ಇದರ ಮಾಜಿ ಅಧ್ಯಕ್ಷ ಕೆ .ಪಿ .ಜಗದೀಶ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು . ಬಳಿಕ ಐದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಲೋಕನಾಥ್ ಎಸ್ ಪಿ, ರಾಜಗೋಪಾಲ್ ಉಳುವಾರು , ಶ್ರೀಧರ್ ದುಗ್ಗಳ, ಚಂದ್ರಶೇಖರ್ ಬಾಚಿ ಗದ್ದೆ, ಯು. ಬಿ ಚಕ್ರಪಾಣಿ, ವರದರಾಜ್ ಸಂಕೇಶ, ಉದಯ ಶಂಕರ್ ಕುಕ್ಕೇ ಟಿ, ನಾಗೇಶ್ ಪೇ ರಾಲ್, ವಿನಯ್ ದುಗ್ಗಳ, ವಿಜಯ ಆಲಡ್ಕ , ಪ್ರಶಾಂತ್ ಇ.ವಿ, ಕಿಶೋರ್ ಕುಮಾರ್ ( ಇಂಡಿಯನ್ ಆಯಿಲ್ ) ಲೋಕೇಶ್ ಟೈಲರ್ , ಕೇಶವ ಬಂಗ್ಲೆ ಗುಡ್ಡೆ,ಬಾಲಚಂದ್ರ ಪೆಲ್ತಡ್ಕ, ದೀಪಕ್ ಪೆರಡ್ಕ, ಮೋಹನ್ ಕುಮಾರ್ ಪೆರಂಗೋಡಿ, ಜಗದೀಶ್ ಪಿ .ಎಲ್, ಜಗದೀಶ್ ನಾಯ್ಕ, ಚಂದ್ರ ವಿಲಾಸ್ ಗೂನಡ್ಕ, ರವಿಕುಮಾರ್ ನಿಡಂಜಿ, ಮನೋಹರ್ ಭಟ್, ಸುಜಿತ್ ಕಟ್ಟ ಕೋಡಿ, ಹೇಮಪ್ರಸಾದ್ ಕಡೆ ಪಾಲ , ವಸಂತ್ ಊರಬೈಲು, ವಾಸುದೇವ ಕಟ್ಟೆ ಮನೆ, ಹಾಗೂ ಇನ್ನಿತರ ದೇಶ ಭಕ್ತ ಬಂಧುಗಳು, ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.











