ಗೂನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಪವಿತ್ರ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

0

ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿರುವ ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಎಸ್.ಎಂ.ಅಬ್ದುಲ್ಲ ಗೂನಡ್ಕ ಹಾಗೂ ಕಲ್ಲುಗುಂಡಿ ಮುಹಿಯ್ಯದ್ದೀನ್ ಜುಮಾ ಮಸೀದಿಗೆ ಒಳಪಟ್ಟ ಸಂಟ್ಯಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಎ.ಅಶ್ರಫ್ ಬಾಲೆಂಬಿ ಮತ್ತು ಅವರ ಪುತ್ರ ಅಫಾನ್ ಬಾಲೆಂಬಿರವರನ್ನು ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ವತಿಯಿಂದ ಇಂದು ಬೀಳ್ಕೊಡಲಾಯಿತು.

ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಖತೀಬರಾದ ಬಹು.ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಷದಿಯವರು ಹಜ್ ಯಾತ್ರಿಕರಿಗೆ ಶುಭ ಹಾರೈಸಿದರು. ಈ ಸಂದರ್ಭ ಸದರ್ ಮುಅಲ್ಲಿಂ ಬಹು.ಮಹಮ್ಮದ್ ಸವಾದ್ ಮದನಿ, ಜಮಾಅತಿನ ಮಾಜಿ ಅಧ್ಯಕ್ಷರುಗಳಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಹಾಜಿ ಅಬ್ದುಲ್ಲ ಕೊಪ್ಪದಕಜೆ, ಉಪಾಧ್ಯಕ್ಷರಾದ ಉಮ್ಮರ್ ಪುತ್ರಿ, ಕಾರ್ಯದರ್ಶಿ ಅಜರುದ್ದೀನ್, ಕೆ.ಎಂ.ಜೆ.ಗೂನಡ್ಕ ಯುನಿಟ್ ಗೌರವಾಧ್ಯಕ್ಷರಾದ ಹಾಜಿ ಅಬ್ಬಾಸ್ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪಿ.ಕೆ.ಅಬೂಸಾಲಿ ಗೂನಡ್ಕ, ಶೌವಾದ್ ಗೂನಡ್ಕ, ಗೂನಡ್ಕ ಎಸ್.ಎಸ್.ಎಫ್.ಯುನಿಟ್ ಅಧ್ಯಕ್ಷರಾದ ಉನೈಸ್ ಗೂನಡ್ಕ, ಗೂನಡ್ಕ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ (ರಿ.) ಪ್ರಧಾನ ಕಾರ್ಯದರ್ಶಿ ಎ.ಟಿ.ಹಸನ್, ಕೋಶಾಧಿಕಾರಿ ಡಿ.ಎಂ.ಅಬ್ದುಲ್ಲ, ಕಾರ್ಯದರ್ಶಿ ಮಿರ್ಶಾದ್ ಚೇರೂರ್, ಕೆ.ಎಂ.ಜೆ.ಗೂನಡ್ಕ ಯುನಿಟ್ ಪ್ರಧಾನ ಕಾರ್ಯದರ್ಶಿ ಟಿ.ಬಿ.ಅಝೀಝ್ ಸೇರಿದಂತೆ ಜಮಾಅತ್ ಸಮಿತಿಯ ಪದಾಧಿಕಾರಿಗಳು, ಅಲ್ ಅಮೀನ್ ಪದಾಧಿಕಾರಿಗಳು, ಸುನ್ನೀ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.