ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರದಾಳಿಯಲ್ಲಿ ಮಡಿದವರಿಗೆ ಎಬಿವಿಪಿ ಶ್ರದ್ಧಾಂಜಲಿ

0

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ಮೌನಾಚರಣೆ ಹಾಗೂ ಶ್ರದ್ಧಾಂಜಲಿ ಸಭೆಯನ್ನು ಕೆವಿಜಿ ಕ್ಯಾಂಪಸ್ ಬಳಿ ನಡೆಯಿತು.

ಹಿರಿಯ ಕಾರ್ಯಕರ್ತರಾದ
ಲೋಹಿತ್ ಬಿಳಿಯಾರು ಅವರು ಪ್ರಕರಣದ ತೀವ್ರತೆಯನ್ನು ಹಾಗೂ ನಮ್ಮ ರಕ್ಷಣಪಡೆಗಳ ಮುಂದಿನ ಕಾರ್ಯತಂತ್ರಗಳನ್ನು ವಿವರಿಸಿದರು. ತಾಲ್ಲೂಕ್ ಸಂಚಾಲಕರಾದ ನಂದನ್ ಪವಿತ್ರಮಜಲು ಕಾರ್ಯಕ್ರಮವನ್ನು ನಿರೂಪಿಸಿದರು.
ಭರತ್ ಅಡೂರ್ ವಂದಿಸಿದರು.
ಸಭೆಯಲ್ಲಿ ನಗರ ಕಾರ್ಯದರ್ಶಿ ಪ್ರೀತೆಶ್ , ಹಾಸ್ಟೆಲ್ ಪ್ರಮುಖ್ ಸುಹಾಸ್, ಸದಸ್ಯರಾದ ಕೀರ್ತನ್,ಬಸವರಾಜ್, ಹೃತ್ವಿಕ್,ಹರ್ಷ,ವಿಕಾಸ್,ತಮ್ಮಯ್ಯ ಅವರು ಉಪಸ್ಥಿತಿ ಇದ್ದರು.