ಕಾಶ್ಮೀರ ಉಗ್ರರ ದಾಳಿಯನ್ನು ಖಂಡಿಸಿ ಮಂಡೆಕೋಲು ಮಹಲ್ ಜಮಾಅತರ ವತಿಯಿಂದ ಪ್ರತಿಭಟನೆ

0

ಕಾಶ್ಮೀರ ಉಗ್ರರ ದಾಳಿಯನ್ನು ಖಂಡಿಸಿ ಮಂಡೆಕೋಲು ಜಮಾಅತರ ವತಿಯಿಂದ ಖಂಡನಾ ಪ್ರತಿಭಟನೆ ಏ 25 ರಂದು ಜುಮಾ ನಮಾಜಿನ ಬಳಿಕ ಮಸೀದಿ ಮುಂಭಾಗ ಜಮಾಅತ್ ಅಧ್ಯಕ್ಷರಾದ ರಾಫಿ ಶಾಲೆಕ್ಕರ್ ನೇತ್ರತ್ವದಲ್ಲಿ ನಡೆಯಿತು.

ಸ್ಥಳೀಯ ಖತೀಬರಾದ ಶಮೀಮ್ ಹರ್ಷದಿ ಯವರು ಉಗ್ರರ ದಾಳಿಯನ್ನು ಖಂಡಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.ಗುಂಡಿನ ದಾಳಿ ನಡೆದ ಸಂದರ್ಭ ಜೀವಬಯದಿಂದ ನರಳಾಡುತ್ತಿರುವ ಅದೆಷ್ಟೋ ಜೀವಗಳಿಗೆ ರಕ್ಷಣಾ ಕಾರ್ಯವನ್ನು ನೀಡುವಲ್ಲಿ ಮುಂದೆ ಬಂದದ್ದು ಮುಸಲ್ಮಾನರು ಎಂದು ಹೇಳಿದರು. ಅವರು ಧರ್ಮವನ್ನು ನೋಡಿ ಅಲ್ಲ ರಕ್ಷಣಾ ಕಾರ್ಯಕ್ಕೆ ಮುಂದೆ ಬಂದದ್ದು. ಆದ್ದರಿಂದ ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದು ಅವರ ಮಾತಿನಲ್ಲಿ ತಿಳಿಸಿದರು. ಜಮಾಅತ್ ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು.


ಕಾರ್ಯದರ್ಶಿ ಅಬ್ದುಲ್ಲ ಮಾರ್ಗ, ಖಜಾಂಜಿ ಇಬ್ರಾಹಿಂ ಹಾಜಿ ಖಜಾಲಂ, ಆಡಳಿತ ಮಂಡಳಿ ಸದಸ್ಯರು,ಊರವರು,ಯುವಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.