ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ದೇವರ ವರ್ಧಂತ್ಯುತ್ಸವ

0


ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ ೨೫ ರಂದು ಬ್ರಹ್ಮ ಶ್ರೀ ಕೆಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ವರ್ಧಂತ್ಯುತ್ಸವ ನಡೆಯಿತು.
ಆಡಳಿತ ಅಧಿಕಾರಿ ಶ್ರೀಮತಿ ಪ್ರೇಮಲತಾ ಕೆ. ಉಪಸ್ಥಿತರಿದ್ದರು.


ಪ್ರಧಾನ ಅರ್ಚಕ ಶ್ರೀ ಹರಿ ಕುಂಜೂರಾಯ ಮತ್ತು ಸಹ ಅರ್ಚಕರು ಸಹಕರಿಸಿದರು. ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಹವಾಚನ, ಮಹಾಗಣಪತಿ ಹೋಮ, ಪಂಚ ವಿಂಶತಿ ಕಲಶಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ, ಸಾನಿಧ್ಯ ಕಲಶ ಅಭಿಷೇಕ, ಬಳಿಕ ಮಹಾ ಪೂಜೆ, ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.


ಸಂಜೆ ಭಜನಾ ಕಾರ್ಯಕ್ರಮ, ದೇವತಾ ಪ್ರಾರ್ಥನೆ, ಮತ್ತು ಸೇವಾ ರಂಗಪೂಜೆ, ಬಳಿಕ ಮಹಾಪೂಜೆ ಪ್ರಸಾದ ಬಳಿಕ ಅನ್ನ ಸಂತರ್ಪಣೆ ನಡೆಯಲಿರುವುದು.