ಸುಳ್ಯ ರೈತ ಸಂಘದಿಂದ ಕಂಪೆನಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಮನವಿ









ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ರೈತರ ಖಾತೆಗಳಿಗೆ ನಿರೀಕ್ಷೆಗಿಂತ ಕಡಿಮೆ ಮೊತ್ತ ಬಂದ ಕಾರಣ ವಿಮಾ ಕಂಪನಿಯ ವಿರುದ್ಧ ಮಾನ್ಯ ಪ್ರಧಾನಿ, ಮುಖ್ಯಮಂತ್ರಿ, ಕೃಷಿ ಸಚಿವರು, ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರು, ಮತ್ತು ಸುಳ್ಯ ತಾಲೂಕು ತಹಶೀಲ್ದಾರ್ ರಿಗೆ ಕರ್ನಾಟಕ ರಾಜ್ಯ ರೈತ ಸಂಘ
ಸುಳ್ಯ ಇದರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು, ಉಪಾಧ್ಯಕ್ಷ ತೀರ್ಥರಾಮ ಪರ್ನೋಜಿ, ರೈತ ನಾಯಕರಾದ ದೇವಪ್ಪ ಗೌಡ ಕುಂದಲ್ಪಾಡಿ, ಮಾಧವ ಗೌಡ ದೊಡ್ಡಿಹಿತ್ಲು ಮರ್ಕಂಜ, ತೀರ್ಥರಾಮ ಬಾಳೆಕಜೆ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.










