ಮೊದಲ ಬಾರಿಗೆ ಬಿಜೆಪಿಗೆ ಭರ್ಜರಿ ಗೆಲುವು
ಕಲ್ಲಪಳ್ಳಿ ಪಂಚಾಯತ್ ಚುನಾವಣೆಯಲ್ಲಿ ಗಡಿ ಪ್ರದೇಶವಾದ ಪನತ್ತಡಿ ಪಂಚಾಯತ್‌ನ ಏಳನೇ ವಾರ್ಡ್ ಕಲ್ಲಪಳ್ಳಿಯಲ್ಲಿ
ಬಿಜೆಪಿ ಜಯ ಗಳಿಸಿದೆ.









ಬಿಜೆಪಿ ಅಭ್ಯರ್ಥಿ ಭವ್ಯ ಜಯರಾಜ್ 173 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಭವ್ಯ ಜಯರಾಜ್ 591 ಮತ ಪಡೆದರೆ, ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಅಭ್ಯರ್ಥಿ ನಳಿನಾಕ್ಷಿ 418 ಮತ ಪಡೆದರು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಸಿಂಧು ಜಾರ್ಜ್ 36 ಮತ ಪಡೆದಿದ್ದಾರೆ. ಈ ಮೂಲಕ ಕಲ್ಲಪಳ್ಳಿ ವಾರ್ಡ್ ಬಿಜೆಪಿ ತನ್ನ ತೆಕ್ಕೆಗೆ ಹಾಕಿ ಕೊಂಡಿದೆ.










