
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕೊಲಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸುಳ್ಯ ವತಿಯಿಂದ ಕ್ಯಾನ್ಸರ್ ಜಾಗೃತಿ ಅಭಿಯಾನ ಇದರ ಅಂಗವಾಗಿ ಡಿ. 13 ರಂದು ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.
ಸುಳ್ಯದ ರಥಬೀದಿಯಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್ ಬಳಿ ಜಾಥಾಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡರವರು ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.

ಅಶ್ವಿನಿ ಕಾಂಪ್ಲೆಕ್ಸ್ ಮಾಲಕ ದಾಮೋದರ ಗೌಡ ನಾರ್ಕೋಡು,
ಸುಳ್ಯ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಗೋಪಾಲಕೃಷ್ಣ ಕೆ. ಎಸ್., ಜಿನ್ನಪ್ಪ ಪೂಜಾರಿ, ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕೊಲಜಿಯ ಸಿಬ್ಬಂದಿಗಳು,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.









ಎಂಐಓ ಇದರ ಮನಶಾಸ್ತ್ರಜ್ಞೆ ಜೇಷ್ಠ ರಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವಿನಿ ಸೇವಾ ಟ್ರಸ್ಟ್ ಸುಳ್ಯದ ಮೆಡಿಕಲ್ ಸೋಶಿಯಲ್ ವರ್ಕರ್ ಹೇಮಂತ್ ನಾರ್ಕೋಡು ಸ್ವಾಗತಿಸಿದರು.
ಜಾಥಾವು ರಥಬೀದಿ, ಮುಖ್ಯರಸ್ತೆ, ಶ್ರೀರಾಮ್ ಪೇಟೆ, ಜ್ಯೋತಿ ಸರ್ಕಲ್ ಬಳಿಯವರಿಗೆ ಸಾಗಿ ಸಮಾಪನಗೊಂಡಿತು. ಜಾಥಾ ಸಮಯದಲ್ಲಿ ರಿಕ್ಷಾ ಚಾಲಕರು, ಅಂಗಡಿ ಮಾಲಕರಿಗೆ ಕ್ಯಾನ್ಸರ್ ಜಾಗೃತಿ ಕರಪತ್ರ ವಿತರಿಸಲಾಯಿತು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಕ್ಯಾನ್ಸರ್ ಸಮೀಕ್ಷೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.










