ಪಹಲ್ಗಾಂ ಭಯೋತ್ಪಾದಕ ದಾಳಿ : ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿ ವಠಾರದಲ್ಲಿ ಸಂತಾಪ ಮತ್ತು ಪ್ರತಿಭಟನಾ ಸಭೆ

0

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡುನಲ್ಲಿ ಏಪ್ರಿಲ್ 25 ಜುಮಾ ನಮಾಝ್ ಬಳಿಕ ಮಸೀದಿ ವಠಾರದಲ್ಲಿ ಪಹಲ್ಗಾಂ ಭಯೋತ್ಪಾದಕ ದಾಳಿ ಅಮಾನವೀಯ ಮತ್ತು ಅತ್ಯಂತ ಹೇಯ ಕೃತ್ಯದ ಬಗ್ಗೆ ಸಂತಾಪ ಮತ್ತು ಪ್ರತಿಭಟನಾ ಸಭೆಯು ನಡೆಯಿತು.


ಜಮ್ಮುಕಾಶ್ಮೀರದ ಪಹಲ್ಗಾಂ ನಲ್ಲಿ ಭಯೋತ್ಪಾದಕರು ನಡೆಸಿದ ಮಾನವ ಹತ್ಯಾ ಕಾಂಡವು ಖಂಡನೀಯವಾಗಿದೆ ಮನುಷ್ಯತ್ವಕ್ಕೆ ನಿಲುಕದ ಘಟನೆಯಾಗಿದೆ, ಆತ್ಮ ಸಾಕ್ಷಿ ಇರುವವರು ಇದನ್ನು ಒಪ್ಪ ತಕ್ಕದ್ದಲ್ಲ, ಈ ಹತ್ಯಾ ಕಾಂಡಕ್ಕೆ ಜಾತಿ ಧರ್ಮದ ಲೇಬಲ್ ಹಚ್ಚದೇ ಎಲ್ಲರೂ ಖಂಡಿಸಬೇಕು, ಈ ಹತ್ಯಾ ಕಾಂಡದಲ್ಲಿ ಮಡಿದವರು ಮತ ಧರ್ಮಕ್ಕೆ ಹೊಲಿಸದೇ ಭಾರತೀಯರಾಗಿರುತ್ತಾರೆ, ಇಸ್ಲಾಂ ಧರ್ಮವು ಎಂದಿಗೂ ಭಯೋತ್ಪಾದನೆಯನ್ನು ಮತ್ತು ಭೀಕರವಾದವನ್ನು ಒಪ್ಪುವುದಿಲ್ಲ, ಮಡಿದವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ನಾವೆಲ್ಲರೂ ಭಾರತೀಯರು ಸಮಗ್ರ ಭಾರತದ ರಕ್ಷಣೆ ಮತ್ತು ಅಭಿವೃದ್ಧಿಗೆ ಪಣ ತೋಡೋಣ ಎಂದು ಸುನ್ನಿ ಮುಸ್ಲಿಂ ಜುಮಾ ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಕರೆ ನೀಡಿದರು.


ಪ್ರತಿಭಟನಾ ಸಭೆಯಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ಕುಂಞಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಎಸ್ ಪಿ, ಮಾಜಿ ಅಧ್ಯಕ್ಷರಾದ ಎಸ್ ಎ ಅಬ್ದುಲ್ ರಝಾಕ್, ಹಾಜಿ ಅಲವಿ ಕುಟ್ಟಿ, ಎಸ್ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಮುನೀರ್ ಪಿ ಎಂ, ಸದಸ್ಯರುಗಳಾದ ಎಸ್ ಕೆ ಅಬ್ದುಲ್ ರಹಿಮಾನ್, ಹಸೈನಾರ್ ಅಮೈ, ಜುಹೈಲ್ ಪಿ ಎಸ್, ಸಮೀರ್, ರಫೀಕ್, ವಾಹೀದ್, ಮುಸ್ತಾಫಾ, ಹಾರಿಸ್ ಎಂ ಹೆಚ್, ರಹಮತ್,ಕುಂಞಿಲಿ ಹಾಗೂ ಸರ್ವ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.