ಬಳ್ಪದಲ್ಲಿ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಸಭೆ – ಗ್ರಾಮ ಸಮಿತಿ ರಚನೆ

0

ಗೌರವಾಧ್ಯಕ್ಷರಾಗಿ ವಿಶ್ವನಾಥ ರೈ ಅರ್ಗುಡಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಕುಳ

ಸುದ್ದಿ ಸುಳ್ಯ ಹಬ್ಬಕ್ಕೆ ಪೂರ್ವ ಭಾವಿಯಾಗಿ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಹಿನ್ನೆಲೆಯಲ್ಲಿ ಬಳ್ಪ ಗ್ರಾಮದ ಗ್ರಾಮಸ್ಥರ ಪೂರ್ವಭಾವಿ ಸಭೆ ಏ. 23ರಂದು ಸಂಜೆ ಬಳ್ಪ ಗ್ರಾ.ಪಂ. ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುದ್ದಿ ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್ ಕೆರೆ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಕುರಿತು ವಿವರ ನೀಡಿದರು.
ಬಳಿಕ ಸುದ್ದಿ ಸುಳ್ಯ ಹಬ್ಬ ಮತ್ತು ಅಭಿಯಾನಕ್ಕೆ ಗ್ರಾಮ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ವಿಶ್ವನಾಥ ರೈ ಅರ್ಗುಡಿ,
ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಕುಳ, ಕಾರ್ಯಾಧ್ಯಕ್ಷರಾಗಿ ರಮಾನಂದ ಎಣ್ಣೆಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಮುಡ್ನೂರು, ಸಂಚಾಲಕರಾಗಿ ಚಂದ್ರಶೇಖರ ಅಕ್ಕೇಣಿ, ಮತ್ತು ಹರೀಶ್ ಕಾರ್ಜ, ಕೋಶಾಧಿಕಾರಿಯಾಗಿ ಅಚ್ಚುತ ಆಲ್ಕಬೆ, ಸಂಯೋಜಕರಾಗಿ ಎಲ್ಯಣ್ಣ ಗೌಡ ಕಟ್ಟ, ಜತೆ ಕಾರ್ಯದರ್ಶಿಯಾಗಿ ಶಶಿಕಲಾ ಸೂಂತಾರು ಮತ್ತು ಯಮುನಾ ಕಾರ್ಜ ಹಾಗೂ ಉಪಾಧ್ಯಕ್ಷರುಗಳಾಗಿ ಶ್ರೀಕೃಷ್ಣ ಭಟ್ ಪಠೋಳಿ, ಹರ್ಷಿತ್ ಕಾರ್ಜ, ಸದಾನಂದ ಕಾರ್ಜ, ಸದಾನಂದ ರೈ ಅರ್ಗುಡಿ ಸಾವಿತ್ರಿ ಕುಳ, ಪದ್ಮನಾಭ ರೈ ಅಗೋಳಿಬೈಲುರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ

ಬೇಬಿ ಭಾಸ್ಕರ್ ಕಟ್ಟ, ರಮಾ ಗುಣಸಾಗರ ಕಟ್ಟ, ಭಾಸ್ಕರ ಕೊರಪ್ಪಣೆ, ಭಾಸ್ಕರ ಗೌಡ ಪಂಡಿ, ಚಂದ್ರಕಾಂತ ಎಂ.ಎಂ, ಸೂರಪ್ಪ ಗೌಡ ಪಂಡಿ, ಮುರಳಿ ಕಾಮತ್ ಬಳ್ಪ, ಸದಾನಂದ ರೈ ಅರ್ಗುಡಿ, ಶಿವಪ್ರಸಾದ್ ಕೊಠಾರಿ, ವಿಜಯಕುಮಾರ್ ಕಾಂಜಿ, ಅಭಿಲಾಷ್ ಕಟ್ಟ, ಲೋಕೇಶ್ ಕಟ್ಟ, ಜಯಂತ ಸಂಪ್ಯಾಡಿ, ದೇವರಾಜ್ ಕೊಠಾರಿ, ತುಳಸಿ ನಾಗೇಶ್ ಪಡಿಕ್ಕಿಲಾಯ, ಚಂದ್ರನಾಥ ಪಠೋಳಿ, ಮಿಥುನ್ ರಾಜ್ ಜತ್ತಿಲ, ಬೆಳ್ಯಪ್ಪ ನಾದೂರು, ಜಲಜಾಕ್ಷಿ ಬಿ.ಕೆರೆ, ಉಮೇಶ್ ಬುಡೆಂಗಿ, ಸಂತೋಷ್ ರೈ ಪಳ್ಳತ್ತಡ್ಕ, ಮುರಳೀಧರ ಎಣ್ಣೆಮಜಲು, ರಾಧಾಕೃಷ್ಣ ಕುಳ, ಪ್ರವೀಣ್ ಕುಂಜತಾಡಿ, ಪಾರ್ವತಿ ಪಿ.ಡಿ, ನೇತ್ರಾವತಿ ಹೊಪ್ಪಾಳೆ, ಸುನಿತಾ ಸಂಪ್ಯಾಡಿ, ಕಿರಣ್ ಕೊನ್ನಡ್ಕ, ಭವ್ಯ ಕಾಯರ, ಪ್ರಶಾಂತ್ ಪೊಟ್ಟುಕೆರೆ, ಗೋಪಾಲ ಎಣ್ಣೆಮಜಲು, ಲೋಕೇಶ್ ಎಣ್ಣೆಮಜಲು, ಲೋಹಿತ್ ಎಣ್ಣೆಮಜಲು, ದೀಪಕ್ ದೊಡ್ಡಮನೆ, ತಾರಾನಾಥ ಕಾರ್ಜ, ಪ್ರಶಾಂತ್ ಕಾರ್ಜ, ದೇವಿಪ್ರಸಾದ್ ನಡುಮನೆ, ವಿನೋದ್ ನಡುಮನೆ, ಹೊನ್ನಪ್ಪ ಎಂರ್ಬಿಲ, ಪುಟ್ಟಣ್ಣ ದೊಡ್ಡಮನೆ, ಪುಟ್ಟಣ್ಣ ಗೌಡ ಕುಳ, ಗಣೇಶ್ ಕೊಠಾರಿ, ಮಹೇಶ್ ಸೂಂತಾರು, ಯೋಗೀಶ್ ಕುಳ, ಪುಟ್ಟಣ್ಣ ಗೌಡ ಕುಂಜತ್ತಾಡಿ, ಪವನ್ ಪಳ್ಳತ್ತಡ್ಕ, ಪ್ರಶಾಂತ್ ಪಳ್ಳತ್ತಡ್ಕ, ಜಗನ್ನಾಥ ಪಳ್ಳತ್ತಡ್ಕ, ಮೋನಪ್ಪ ಅಕ್ಕೇಣಿ, ಶಿವಪ್ರಸಾದ್ ಅಕ್ಕೇಣಿ, ಶಿವಪ್ಪ ಅರ್ಗುಡಿ, ಶಿವಣ್ಣ ಕಲುಂಗುಡಿ, ರಕ್ಷಿತ್ ಕಲುಂಗುಡಿ, ಚಿಂತನ್ ಆಲ್ಕಬೆ, ಚಂದ್ರಶೇಖರ ಕಟ್ಟ, ರವೀಂದ್ರ ಬುಡ್ಲ, ರವಿ ಕೊಠಾರಿ ಹರಿಪ್ರಸಾದ್ ಕಲ್ಲೂರಾಯ, ಮನೋಹರ ನೀರಜರಿ, ನೀಲೇಶ್ವರ ನಾಳ, ಸೀತಾರಾಮ ಎಣ್ಣೆಮಜಲು, ರಾಧಾಕೃಷ್ಣ ನಾದೂರುರವರನ್ನು ಆಯ್ಕೆ ಮಾಡಲಾಯಿತು.
ಸುದ್ದಿ ವರದಿಗಾರ ಈಶ್ವರ ವಾರಣಾಶಿ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ ವಂದಿಸಿದರು.
ಸುದ್ದಿಯ ಈ ಹಿಂದಿನ ಕಾರ್ಯಕ್ರಮಗಳನ್ನು ನಾವು ಬೆಂಬಲಿಸಿದ್ದೇವೆ. ಮುಂದೆಯೂ ಬೆಂಬಲವನ್ನು ನೀಡುತ್ತೇವೆ – ವಿಶ್ವನಾಥ ರೈ ಅರ್ಗುಡಿ

ಸುದ್ದಿ ಪತ್ರಿಕೆ ಹೋರಾಟದ ಮೂಲಕ ಬೆಳೆದು ಬಂದದ್ದು. ನೈಜ ವರದಿಗಳನ್ನು ಪ್ರಕಟಿಸುವ ಮೂಲಕ ಸೋಮವಾರ ಪತ್ರಿಕೆ ಬರುವುದನ್ನೇ ಕಾಯುತ್ತೇವೆ. ನಮ್ಮ ಗ್ರಾಮದ ವಿಶೇಷತೆಗಳು ಡಿಜಿಟಲ್ ಮಾಧ್ಯಮದಲ್ಲಿ ದಾಖಲೀಕರಿಸುವಂತದ್ದು, ಸಾಧಕರನ್ನು ಸನ್ಮಾನಿಸುವಂತದ್ದು ಉತ್ತಮ ಕಾರ್ಯ – ಸುಬ್ರಹ್ಮಣ್ಯ ಕುಳ

ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನ ಅಭಿನಂದನಾರ್ಹ. ನಾವು ನಮ್ಮೂರಿನ ವಿಶೇಷತೆಗಳನ್ನು ನೀಡುತ್ತೇವೆ. ಅದನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಗೊಳಿಸಿದಾಗ ನಮ್ಮ ಊರಿನ ಬಗ್ಗೆ ಹೊರಗಿನವರೂ ಹೆಮ್ಮೆ ಪಡಲಿದ್ದಾರೆ – ಹರ್ಷಿತ್ ಕಾರ್ಜ