ಶೇ.100 ಫಲಿತಾಂಶ ದಾಖಲಿಸಿದ ಪಂಜ ಸರಕಾರಿ ಜೂನಿಯರ್ ಕಾಲೇಜು

0

ಎಸ್.ಎಸ್‌.ಎಲ್‌.ಸಿ ಪಬ್ಲಿಕ್ ಪರೀಕ್ಷೆಯಲ್ಲಿ , ಪಂಜ ಸರಕಾರಿ ಜೂನಿಯರ್ ಕಾಲೇಜು ಪ್ರಥಮ ಬಾರಿಗೆ ಬಾರಿಯೂ ಶೇ.100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 13 ಹುಡುಗರು 13 ಹುಡುಗರಿಯರು ಒಟ್ಟು 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆ ಹೊಂದಿದ್ದಾರೆ.

ಇವರಲ್ಲಿ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 16ವಿದ್ಯಾರ್ಥಿಗಳು ಪ್ರಥಮ, 3ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪಂಬೆತ್ತಾಡಿ ಗ್ರಾಮದ ಚೀಮುಳ್ಳು ಹೊನ್ನಪ್ಪ ನಾಯ್ಕ ಮತ್ತು ಮಹದೇವಿ ದಂಪತಿಗಳ ಪುತ್ರಿ ಸಿಂಚನಾ 557, ಕೂತ್ಕುಂಜ ಗ್ರಾಮದ ಚಿದ್ಗಲ್ಲು ಸತ್ಯನಾರಾಯಣ ಮತ್ತು ಪ್ರೇಮ ದಂಪತಿಗಳು ಪುತ್ರಿ ಪ್ರಜ್ಞಾ 550, ಕೋಡಿಂಬಳ ಹೈದರ್ ಶರೀಫ್ ಮತ್ತು ಸಕಿನಾ ದಂಪತಿಗಳ ಪುತ್ರಿ ರಿಹನಾ 550 , ಐವತ್ತೊಕ್ಲು ಗ್ರಾಮದ ಪೊಳೆಂಜ ಅಣ್ಣಪ್ಪ ಮತ್ತು ಸುಶೀಲಾ ದಂಪತಿಗಳ ಪುತ್ರಿ ಜಯಶ್ರೀ 539, ಕೂತ್ಕುಂಜ ಗ್ರಾಮದ ಪೇರಪ್ಪ ಮತ್ತು ಶಶಿಕಲಾ ದಂಪತಿಗಳ ಪುತ್ರಿ ಶ್ರಾವ್ಯ 535 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಗೊಂಡಿದ್ದಾರೆ. ಎಂದು ಮುಖ್ಯ ಶಿಕ್ಷಕ ದೇವಿಪ್ರಸಾದ್ ಪಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.