ಗಾಂಧಿನಗರ ಕೆಪಿಎಸ್ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ.96.4 ಫಲಿತಾಂಶ

0

ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್.ಎಸ್.ಎಲ್.ಸಿಯಲ್ಲಿ ಶೇ.96.4 ಫಲಿತಾಂಶ ಬಂದಿದೆ.
ಒಟ್ಟು 28 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು
27 ಮಂದಿ ಉತ್ತೀರ್ಣರಾಗಿದ್ದಾರೆ.


ಓರ್ವ ವಿಶಿಷ್ಟ ಶ್ರೇಣಿ,16 ಮಂದಿ ಪ್ರಥಮ ಶ್ರೇಣಿ, 09 ಮಂದಿ ದ್ವಿತೀಯ ಶ್ರೇಣಿ,1 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅನ್ಸಾರಿಯಾ ಎಜುಕೇಷನ್ ಸೆಂಟರ್ ನ ವಿದ್ಯಾರ್ಥಿ ಅಬ್ದುಲ್ ರಜಾಕ್ ಹಾಗೂ ಅಪ್ಸ ದಂಪತಿಗಳ ಪುತ್ರ ಮಹಮ್ಮದ್ ಸ್ವಾಲಿಹ್ 568 ಪಡೆದು ಶಾಲೆಗೆ ಪ್ರಥಮ ಹಾಗೂ ನಾವೂರು ನಿವಾಸಿ ಅಬೂಬಕ್ಕರ್ ಸಿದ್ದಿಕ್ ಹಾಗೂ ನಬಿಸಾ ದಂಪತಿಗಳ ಪುತ್ರಿ ಫಾತಿಮತ್ ಸಫ್ರಿನಾ 527 ಅಂಕದಿಂದ ದ್ವಿತೀಯ ಪಡೆದು ಕೊಂಡಿದ್ದಾರೆ.