ಕೊಯನಾಡು ಗುಡ್ಡೆಗದ್ದೆ ಶ್ರೀ ಮಲೆ ಚಾಮುಂಡೇಶ್ವರಿ – ಗುಳಿಗ ದೈವದ ವಾರ್ಷಿಕ ಪ್ರತಿಷ್ಠೆ ಹಾಗೂ ನೇಮ ನಡಾವಳಿ

0

ಕೊಡಗು ಸಂಪಾಜೆ ಗ್ರಾಮದ ಕೊಯನಾಡು – ಗುಡ್ಡೆ ಗದ್ದೆ ಶ್ರೀ ಮಲೆ ಚಾಮುಂಡೇಶ್ವರಿ ದೈವ ಹಾಗೂ ಗುಳಿಗ ದೈವದ
ವಾರ್ಷಿಕ ಪ್ರತಿಷ್ಠೆ ಕಾರ್ಯಕ್ರಮ ಹಾಗೂ ನೇಮ ನಡಾವಳಿ ಮೇ 3 ರಂದು ನಡೆಯಿತು.

ಬೆಳಿಗ್ಗೆ 6 ಗಂಟೆಗೆ ಕೊಯನಾಡು ಕೊಯನಾಡು ಮಹಾಗಣಪತಿ ದೇವಸ್ಥಾನದ ಅರ್ಚಕ ಲಕ್ಷ್ಮೀಶ್ ಭಟ್ ಗಣಪತಿ ಹೋಮ ನೆರವೇರಿಸಿದರು. 9 ಗಂಟೆಗೆ ಪ್ರತಿಷ್ಠಾ ಪೂಜೆ , ಮಂಗಳಾರತಿ , ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಗಂಟೆಯಿಂದ ಎಣ್ಣೆ ಕೊಡುವುದು, ಶ್ರೀ ಮಲೆ ಚಾಮುಂಡೇಶ್ವರಿ ದೈವ ಹಾಗೂ ಗುಳಿಗ ದೈವಗಳ ನೇಮ ನಡಾವಳಿ , ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಊರ – ಪರವೂರಿನಿದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೈವದ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರ ಮತ್ತಾಡಿ ಬಂಬ, ದೈವದ ಪೂಜಾಕರ್ಮಿ ಕೆ.ಕೆ ರಮೇಶ್ , ಕುಟುಂಬಸ್ಥರು, ಸರ್ವಸದಸ್ಯರು ಹಾಗೂ ಊರಭಕ್ತಾಧಿಗಳು ಉಪಸ್ಥಿತರಿದ್ದರು.