ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯೇ ಹೊಳೆಯಾದ ಕಿಲಂಗೋಡಿ ಬೆಳ್ಳಾರೆ ಸಂಪರ್ಕ ಕಲ್ಪಿಸುವ ಪಡ್ಪು ರಸ್ತೆ

0

ಬೆಳ್ಳಾರೆ ಕಿಲಂಗೋಡಿ ರಸ್ತೆಯ ಪಡ್ಪು ಎಂಬಲ್ಲಿ ರಸ್ತೆಯ ಇಕ್ಕೆಲದಲ್ಲಿ ಇದ್ದ ಚರಂಡಿ ಮುಚ್ಚಿ ಹೋಗಿ ಮಳೆ ನೀರು ರಸ್ತೆಯಲ್ಲೇ ಹರಿಯುವ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಬೆಳ್ಳಾರೆ ಗ್ರಾ.ಪಂ. ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸೈಟ್ ನಿರ್ಮಾಣ ಮಾಡುತ್ತಿದ್ದು, ಅಲ್ಲಿಯೂ ನೀರು ಹೋಗಲು ಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಮಳೆ ಬಂದಾಗ ಮಣ್ಣು ನೀರು ರಸ್ತೆಯಲ್ಕೆ ಹರಿಯಲು ಕಾರಣವಾಗಿದೆ.
ರಸ್ತೆಯ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಯ ಕಾರ್ಯವೂ ನಡೆದಿರುವುದರಿಂದ ಮಣ್ಣು ಕೊಚ್ಚಿ ಹೋಗಿ ರಸ್ತೆಯಲ್ಲೇ ಶೇಖರಣೆಗೊಂಡು ಪಾದಚಾರಿಗಳಿಗೂ, ವಾಹನ ಚಾಲಕರಿಗೂ ಅಡಚಣೆಯುಂಟಾಗಿದೆ. ಇದು ಬೆಳ್ಳಾರೆಯ ಪಡ್ಪಿನ ವಿಷಯ ಮಾತ್ರ ಅಲ್ಲ. ತಾಲೂಕಿನ ಬಹುತೇಕ ರಸ್ತೆಗಳು ಇದೇ ಪರಿಸ್ಥಿತಿಯಲ್ಲಿದೆ‌. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.