ಐವರ್ನಾಡು ಗ್ರಾಮದ ಚೆಮ್ನೂರು ತರವಾಡು ಮನೆಯಲ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವವು ಮೇ.06 ಮತ್ತು 07 ರಂದು ನಡೆಯಿತು.

ಮೇ.೦6 ರಂದು ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ದೇವರ ಪೂಜೆ,ನಾಗತಂಬಿಲ ನಡೆಯಿತು. ಬಳಿಕ ಶ್ರೀ ವೆಂಕಟರಮಣ ದೇವರ ಹರಿಸೇವೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನ ಶ್ರೀ ದೈವಗಳ ಭಂಡಾರ ಹಿಡಿಯಲಾಯಿತು. ಬಳಿಕ ಪಾಷಾಷ ಮೂರ್ತಿ ,ಕೊರತ್ತಿ ದೈವಗಳ ನೇಮ ನಡಾವಳಿ ನಡೆಯಿತು.








ಮೇ.೦7 ರಂದು ಬೆಳಿಗ್ಗೆ ಶ್ರೀ ರಕ್ತೇಶ್ವರಿ ,ನಾಗಚಾಮುಂಡಿ,ಪುರುಷರಾಯ,ಪಂಜುರ್ಲಿ ದೈವಗಳ ನೇಮ ನಡಾವಳಿ ನಡೆಯಿತು. ಬೆಳಿಗ್ಗೆ ಗಂಟೆ 5.೦೦ ರಿಂದ ರುದ್ರಚಾಮುಂಡಿ ಮತ್ತು ಶೀರಾಡಿ ದೈವಗಳ ನೇಮ ನಡಾವಳಿ ನಡೆಯಿತು. ಬಳಿಕ ಮಾರಿಕಳಕ್ಕೆ ಹೋಗಲಾಯಿತು.
ಮಧ್ಯಾಹ್ನ ಪ್ರಸಾದ ವಿತರಣೆ ,ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಗುಳಿಗ ವಗೈರೆ ದೈವಗಳಿಗೆ ನೇಮ ನಡಾವಳಿ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಸುಬ್ಬಪ್ಪ ಗೌಡ ಚೆಮ್ನೂರು,ಕೊರಗಪ್ಪ ಗೌಡ ಚೆಮ್ನೂರು,ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಚೆಮ್ನೂರು ಕುಟುಂಬಸ್ಥರು ಸಾವಿರಾರು ಜನ ಭಕ್ತಾದಿಗಳುಉಪಸ್ಥಿತರಿದ್ದರು










