ಮೇ.8 ರಿಂದ ಮೇ.13 ರ ವರಗೆ ನರಸಿಂಹ ಜಯಂತಿ ಮಹೋತ್ಸವ

0

ಮೇ.11 ನರಸಿಂಹ ಜಯಂತಿ, ಮೇ. 12 ಮಹಾ ರಥೋತ್ಸವ, ಮೇ.13 ಗಂಗಾ ಶಶಿಧರನ್ ವಯಲಿನ್ ವಾದನ

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಮಹೋತ್ಸವ ಮೇ.8 ರಿಂದ ಮೇ.13 ರ ವರೆಗೆ ಅದ್ದೂರಿಯಾಗಿ ನಡೆಯಲಿದೆ.

ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾ ಪ್ರಸನ ಶ್ರೀಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ಜರುಗಲಿದೆ.
ಮೇ. 9 ರಂದು ಶ್ರೀ ವೇದವ್ಯಾಸ ಜಯಂತೀ, ವಸಂತ ಪೂಜೆ ನಡೆಯಲಿದೆ. ಮೇ. 10 ಪ್ರಾತಃಕಾಲ ಗಣಹೋಮ ಮತ್ತು ಶ್ರೀ ನರಸಿಂಹ ಹೋಮ ನಡೆಯಲಿದೆ. ಮೇ.11ರಂದು ಶ್ರೀ ನರಸಿಂಹ ಜಯಂತಿ ಯಂದು ಪ್ರಾತಃಕಾಲ ಶ್ರೀ ನರಸಿಂಹ ದೇವರ ಮಹಾಭಿಷೇಕ ನಡೆಯಲಿದೆ , ಅದೇ ದಿನ ರಾತ್ರಿ ಹೊರಾಂಗಣ ಮತ್ತು ರಾಜ ಬೀದಿಯಲ್ಲಿ ವಿಮಾನೋತ್ಸವ, ವಸಂತಪೂಜೆ, ಡೋಲೋತ್ಸವ ನಡೆಯಲಿದೆ. ಮೇ.12ರಂದು ಪೂರ್ವಾಹ್ನ ವ್ಯಾಸ ಪೂರ್ಣಿಮಾ, ವ್ಯಾಸ ಪೂಜೆ, ಮಹಾರಥೋತ್ಸವ ನಡೆದು ವಸಂತ ಪೂಜೆ ನಡೆಯಲಿದೆ, ರಾತ್ರಿ ಡೋಲೋತ್ಸವ ನಡೆಯಲಿದೆ. ಮೇ. 13 ರಂದು ಕುಮಾರಧಾರೆಯಲ್ಲಿ ಅವಭೃತೋತ್ಸವ, ವಸಂತಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಮೇ. 8 ರಂದು: ಮಠದ ಶ್ರೀ ಅನಿರುದ್ದತೀರ್ಥ ವೇದಿಕೆಯಲ್ಲಿ. ಪ್ರಾತಃಕಾಲ ಗಂಟೆ 6.30ರಿಂದ ಸಂಜೆ ಗಂಟೆ 6.30ರ ವರೆಗೆ ಏಕಾದಶಿ ನಾಮ ಸಂಕೀರ್ತಣೆ-ದೇವರ ನಾಮಗಳ ಗಾಯನ ನಡೆಯಲಿದೆ. ಮೇ.9 ರ ರಾತ್ರಿ ಗಂಟೆ 7.೦೦ರಿಂದ ನಾಟಕ ಬಿತ್ತಿಲ್ದ ಉಳ್ಳಾಲ್ದಿ ಅಪ್ಪೆ ಭಗವತಿ ನಡೆಯಲಿದೆ. ಮೇ.1೦ ರಾತ್ರಿ ಗಂಟೆ 7.೦೦ರಿಂದ ವಾದ್ಯ ಸಂಗೀತ ಶ್ವೇತಾ ದೇವಾಡಿಗ ಮತ್ತು ಬಳಗದವರಿಂದ ನಡೆಯಲಿದೆ.
ಮೇ.11 ರ ಬೆಳಿಗ್ಗೆ ಗಂಟೆ 9.೦೦ರಿಂದ 11.೦೦ರ ವರೆಗೆ ಶ್ರೀ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ಹಾಗೂ ಬೆಳಿಗ್ಗೆ ಗಂಟೆ 11.೦೦ರಿಂದ ಆನಂದತೀರ್ಥ ತತ್ವದರ್ಶಿನೀ ಸಭಾ
ಅನುಗ್ರಹ ಸಂದೇಶ ಪೇಜಾವರ ಅಧೋಕ್ಷಜ ಮಠ ಉಡುಪಿ ಯ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಹಾಗೂ
ಸುಬ್ರಹ್ಮಣ್ಯ ಮಠದ ಡಾಟ ಶ್ರೀ ಶ್ರೀ ವಿಶ್ವಪ್ರಸನ್ನ ಶ್ರೀಪಾದರಿಂದ ನಡೆಯಲಿದೆ. ಬಳಿಕ
ವಿದ್ವಾನ್ ಕಲ್ಲಾಪುರ ಪವಮಾನ ಆಚಾರ್ಯ ಅವರಿಂದ ” ನರಸಿಂಹ ಪ್ರಾದುರ್ಭಾವ” ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ.

ಸಂಜೆ ಗಂಟೆ 4.೦೦ರಿಂದ ಪುರಾಣೇತಿಹಾಸಗೋಷ್ಠಿ ನಡೆಯಲಿದ್ದು ಶ್ರೀ ಶ್ರೀ ವಿದ್ಯಾಪ್ರಸನ್ನ ತೀಥ ಶ್ರೀಪಾದರು ನಿರ್ವಾಹಕ ಅಧ್ಯಕ್ಷತೆ ವಹಿಸಲಿದ್ದಾರೆ.
ಪೂರ್ಣಪ್ರಜ್ಞಾ ವಿದ್ಯಾಪೀಠ ಬೆಂಗಳೂರು ನಿವೃತ್ತ ಪ್ರಾಂಶುಪಾಲರು, ಮಹಾಮಹೋಪಾಧ್ಯಾಯ ಎ. ಹರಿದಾಸ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿದ್ವಾಂಸರುಗಳುಗಳಾದ ಡಾ. ಬಿ.ಎನ್. ವಿಜಯೇಂದ್ರ ಆಚಾರ್ಯ ಮೈಸೂರು, ಡಾ. ವೆಂಕಟೇಶ ಆಚಾರ್ಯ ಕುಲಕರ್ಣಿ, ಬೆಂಗಳೂರು ಭಾಗವಹಿಸಲಿದ್ದಾರೆ.
ಮೇ.12 ಸಂಜೆ ಗಂಟೆ 7.೦೦ರಿಂದ ಲಯ-ಲಾವಣ್ಯ-ತಾಳವಾದ್ಯ ವೃಂದ ಅನಂತ ಶರ್ಮ ಬೆಂಗಳೂರು ಅವರಿಂದ ನಡೆಯಲಿದೆ.

ನಡೆಯಲಿದೆ. ಮೇ. 13ಸಂಜೆ ಗಂಟೆ 6.೦೦ರಿಂದ 8.೦೦ರ ವರೆಗೆ ಖ್ಯಾತ ವಯಲಿನ್ ವಾದಕಿ ಗಂಗಾ ಶಶಿಧರನ್ ಅವರಿಂದ ವಯಲಿನ್ ವಾದನ ನಡೆಯಲಿದೆ. ಬಳಿಕ
ರಾತ್ರಿ ಗಂಟೆ 8.೦೦ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ
ಯಕ್ಷಗಾನ ಬಯಲಾಟ – ಬನತ ಬಂಗಾರ್ (ತುಳು ಪ್ರಸಂಗ)
ಪ್ರದರ್ಶನ ನಡೆಯಲಿದೆ