ಬೆಳ್ಳಾರೆ ರೋಟರಿ ಕ್ಲಬ್ ನಿಂದ ರಾಮಕುಮೇರಿ ಹರಿಪ್ರಸಾದ್ ರವರ ಚಿಕಿತ್ಸೆಗೆ ಧನ ಸಹಾಯ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನಿಂದ ಅಪ್ಲಾಸ್ಟಿಕ್ ಅನಿಮಿಯಾ ಕಾಯಿಲೆಗೆ ತುತ್ತಾಗಿರುವ ರಾಮಕುಮೇರಿ ಹರಿಪ್ರಸಾದ್ ಎಂಬವರಿಗೆ ಧನ ಸಹಾಯ ನೀಡಲಾಯಿತು.
ಡಿ.09 ರಂದು ರಾಮಕುಮೇರಿ ರವೀಂದ್ರ ಗೌಡರವರ ಮನೆಯಲ್ಲಿ ನಡೆದ ರೋಟರಿ ಮೀಟಿಂಗ್ ನಲ್ಲಿ ರೂ.15,000 ವನ್ನು ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ಕೊಳಂಬಳರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋಟರಿ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.