ಸುಳ್ಯ ಸೀಮೆ ತೊಡಿಕಾನ ದೇವಸ್ಥಾನದಲ್ಲಿ ವಿಶೇಷ ಪೂಜೆ – ಪ್ರಾರ್ಥನೆ

0


ಉಗ್ರರ ಮತ್ತು ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರಿಗೆ ಎಲ್ಲಾ ರೀತಿಯ ಜಯ ಸಿಗುವಂತಾಗಲಿ ಎಂದು ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಿತು.


ಕರ್ನಾಟಕ ಸರಕಾರದ ಆದೇಶದಂತೆ ದೇವಸ್ಥಾನಗಳಲ್ಲಿ ಭಾರತೀಯ ಸೈನಿಕರ ಕ್ಷೇಮಾಭಿವೃದ್ಧಿ, ಸೇನೆಗೆ ಇನ್ನಷ್ಟು ಶಕ್ತಿಯನ್ನು ಭಗವಂತ ಕರುಣಿಸಲಿ, ಉಗ್ರರ ಧಮನವಾಗಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನಡೆಯಿತು. ಸೈನಿಕರಿಗೆ ಎಲ್ಲಾ ರೀತಿಯ ಜಯ ಸಿಗಲಿ ಎಂದು ಪ್ರಾರ್ಥಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು, ಭಜನಾ ಮಂಡಳಿಯವರು, ಸೀಮೆಯ ಭಕ್ತರು ಉಪಸ್ಥಿತರಿದ್ದರು.