ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ ನ ನೂತನ ಕಟ್ಟಡದ ಉದ್ಘಾಟನೆ

0

ಶಿಕ್ಷಣದಿಂದ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯ : ಮುತ್ತುಕೋಯ ತಂಙಳ್

” ಶಿಕ್ಷಣ ಮನುಷ್ಯರನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಸಂಸ್ಕಾರಯುತ ಶಿಕ್ಷಣ ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ. ಶಿಕ್ಷಣದ ಮಹತ್ವವನ್ನು ಅರಿತು ಬೆಳ್ಳಾರೆಯಲ್ಲಿ ಹಿದಾಯ ಪಬ್ಲಿಕ್ ಶಾಲೆಯನ್ನು ಆರಂಭಿಸಿದ ಶಾಲಾ ಆಡಳಿತ ಮಂಡಳಿಯವರಿಗೆ ಅಭಿನಂದನೆಗಳು” ಎಂದು ಕೇರಳ ಸಮಸ್ತ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.


ಅವರು ಮೇ. 24 ರಂದು ಬೆಳ್ಳಾರೆಯ ಹಿದಾಯ ಪಬ್ಲಿಕ್‌ ಸ್ಕೂಲ್‌ ನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಹಿದಾಯ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಹಾಜಿ ಯು.ಹೆಚ್. ಅಬೂಬಕ್ಕರ್ ಮಂಗಳ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಯ್ಯದ್ ಎನ್.ಪಿ.ಎಂ. ಝೈನುಲ್ ಅಬಿದಿನ್ ತಂಙಳ್ ದುಗ್ಗಲಡ್ಕ ಪ್ರಾರ್ಥನೆ ನೆರವೇರಿಸಿದರು. ಚಿಕ್ಕಮಗಳೂರು, ಉಡುಪಿ ಖಾಝಿ ಮಾಣಿ ಉಸ್ತಾದ್, ಸಯ್ಯದ್ ಬುರ್ಹಾನ್ ಅಲಿ ತಂಙಳ್ ಮಾಡನ್ನೂರು, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಎಸ್.ಮಹಮ್ಮದ್, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ, ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷ ಹಾಜಿ ಯು.ಹೆಚ್.ಅಬೂಬಕ್ಕರ್ ಮಂಗಳ, ಸಂಚಾಲಕ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಮತ್ತು ದಾನಿಗಳಾದ ಉದ್ಯಮಿ ಅನ್ಸಾರ್ ಬಿ.ಹೆಚ್. ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಅನೇಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿದಾಯ ಪಬ್ಲಿಕ್ ಸ್ಕೂಲ್ ಹಿದಾಯ ಸ್ಕೂಲ್ ಕೋಶಾಧಿಕಾರಿ ಝಕಾರಿಯ, ಝಕಾರಿಯ ಜುಮ್ಮಾ ಮಸೀದಿ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಜೊತೆ ಕಾರ್ಯದರ್ಶಿ ಅಜರುದ್ದೀನ್, ಪದಾಧಿಕಾರಿಗಳಾದ ಹಮೀದ್ ಹೆಚ್.ಎಂ. ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಹಿದಾಯತುಲ್ ಇಸ್ಲಾಂ ಮದರಸ ಬೆಳ್ಳಾರೆ ಇದರ ಸದರ್ ಮುಅಲ್ಲಿಂ ಮುಹಮ್ಮದ್ ನವವಿ ಮುಂಡೋಳ್ ಸ್ವಾಗತಿಸಿ, ಹಿದಾಯ ಪಬ್ಲಿಕ್ ಸ್ಕೂಲ್ ನ ಪ್ರಧಾನ ಕಾರ್ಯದರ್ಶಿ ಬಶೀರ್ ಯು.ಪಿ. ಬೆಳ್ಳಾರೆ ವಂದಿಸಿದರು. ಪಿ.ಎ. ಮರ್ಧಾಳ ಮತ್ತು ಮೊಹಮ್ಮದ್ ನಿಸಾರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.