








ಕೋಲ್ಚಾರಿನ ಕೂಳಿಯಡ್ಕ ಕುಡೆಂಬಿ ಪ.ಪಂಗಡದ ನಿವಾಸಿಗಳು ವಾಸವಿರುವ ಪ್ರದೇಶದ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ ಸ್ಥಳೀಯ ನಾಗರಿಕರು ಮೇ.24 ರಂದು ಮನವಿ ನೀಡಿದರು.
ಈ ಭಾಗದಲ್ಲಿ ಸುಮಾರು 50 ಕ್ಕಿಂತಲೂ ಹೆಚ್ಚು ಮನೆಗಳಿದ್ದು ಪ.ಪಂಗಡಕ್ಕೆ ಸೇರಿದವರಾಗಿದ್ದು ಕೂಳಿಯಡ್ಕ ಎಂಬಲ್ಲಿಂದ 1.5 ಕಿ.ಮೀ ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯಕರವಾಗಿದೆ. ಈ ಭಾಗದ ನಿವಾಸಿಗಳು ತಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗೆ ಇದೇ ರಸ್ತೆಯಲ್ಲಿ ಬರಬೇಕಾಗಿದ್ದು ಮಳೆಗಾಲದಲ್ಲಿ ತುಂಬಾ ತೊಂದರೆಅನುಭವಿಸುವಂತಾಗಿದೆ. ಈ ಹಿಂದೆ ರಸ್ತೆ ದುರಸ್ತಿ ಪಡಿಸುವಂತೆ ಬೇಡಿಕೆ ಇರಿಸಲಾಗಿದ್ದು ಅನೇಕ ಬಾರಿ ಮನವಿನೀಡಿದರೂಏನೂಪ್ರಯೋಜನವಾಗಿಲ್ಲ. ನಿಮ್ಮ ಅಧಿಕಾರ ಅವಧಿಯಲ್ಲಿ ಅನುದಾನ ಒದಗಿಸಿಕೊಟ್ಟು
ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಿರುತ್ತಾರೆ. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕುಡೆಂಬಿ ಪರಿಸರದ ನಾಗರಿಕರು ಉಪಸ್ಥಿತರಿದ್ದರು.










