ಆಲೆಟ್ಟಿಯ ಕೋಲ್ಚಾರಿನ ಶ್ರೀ ಶಾರದಾಂಬಾ ಭಜನಾ ಮಂದಿರದ ಪಕ್ಕದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸಲಿರುವ
ಶ್ರೀ ಶಾರದಾಂಬಾ ಸಭಾಭವನಕ್ಕೆ ಗುದ್ದಲಿ ಪೂಜೆಯು ಮೇ.24 ರಂದು ನೆರವೇರಿತು.









ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಪ್ರಾರ್ಥನೆ ನೆರವೇರಿಸಿ ಬಳಿಕ
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ
ಕು. ಭಾಗೀರಥಿ ಮುರುಳ್ಯ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ರವರ ವಿಶೇಷ ಅನುದಾನ ರೂ.5 ಲಕ್ಷ ಒದಗಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು,ಪಂ.ಸದಸ್ಯರಾದ ದಿನೇಶ್ ಕಣಕ್ಕೂರು, ಧರ್ಮಪಾಲ ಕೊಯಿಂಗಾಜೆ, ಶಂಕರಿ ಕೊಲ್ಲರಮೂಲೆ, ಮಾಜಿ ಸದಸ್ಯರಾದ ಸೀತಾರಾಮ ಕೊಲ್ಲರಮೂಲೆ, ಕೈಕಳ ಕೊಯಿಂಗಾಜೆ,ಆಲೆಟ್ಟಿ
ಸೊಸೈಟಿ ನಿರ್ದೇಶಕ ಚಿದಾನಂದ ಕೋಲ್ಚಾರು, ಮಾಜಿ ನಿರ್ದೇಶಕ ಸುದರ್ಶನ ಪಾತಿಕಲ್ಲು, ಪ್ರಮುಖರಾದ ಮನೋಜ್ ಕೋಲ್ಚಾರು, ಪ್ರಣೀತ್ ಕಣಕ್ಕೂರು, ಪ್ರದೀಪ್ ಕೊಲ್ಲರಮೂಲೆ, ಆನಂದ ಕುಡೆಂಬಿ, ಮಾಲಿಂಗ ಕಣಕ್ಕೂರು, ಜಗದೀಶ್ ಕೂಳಿಯಡ್ಕ,ನೀಲಕಂಠ ಕೊಲ್ಲರಮೂಲೆ, ಸೀತಾರಾಮ ಕೋಲ್ಚಾರು, ಧನು ಕೋಲ್ಚಾರು, ಸಜೇಶ್ ಕೊಯಿಂಗಾಜೆ, ಗೋಪಾಲಕೃಷ್ಣ ಬಳ್ಯಾಡಿ, ಕೇಶವ ಕುಡೆಂಬಿ, ಬಾಲಕೃಷ್ಣ ಕುಡೆಂಬಿ, ಚಿನ್ನಪ್ಪ ಗೌಡ ಕರ್ಲಪ್ಪಾಡಿ, ಶ್ರೀಧರ ಕೂಳಿಯಡ್ಕ, ಶ್ರೀಮತಿ ರತ್ನಾವತಿ ವಾಲ್ತಾಜೆ, ದಾಸಪ್ಪ ಕೊಯಿಂಗಾಜೆ, ಧನು ಕುಡೆಂಬಿ, ಸಂಜಯ್ ಕೂಳಿಯಡ್ಕ, ಮೋಹಿತ್ ವಾಲ್ತಾಜೆ,ನಾರಾಯಣ ಕುಡೆಂಬಿ, ಸಿದ್ದಾರ್ಥ ಕೋಲ್ಚಾರು, ಮನಮೋಹನ ಕೋಲ್ಚಾರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ಸುದರ್ಶನ ಪಾತಿಕಲ್ಲು ಕಾರ್ಯಕ್ರಮ ನಿರ್ವಹಿಸಿದರು.










