ಪೆರುವಾಜೆ ಪಂಚಾಯತ್ ಮತ್ತು ಊರವರಿಂದ ಹುಟ್ಟೂರಲ್ಲಿ ಸನ್ಮಾನ















ಪೆರುವಾಜೆ ಗ್ರಾಮ ಪಂಚಾಯಿತಿ ಮತ್ತು ಊರವರಿಂದ ಅಂತಾರಾಷ್ಟ್ರೀಯ ಆರ್ಯ ಭಟ ಪ್ರಶಸ್ತಿ ವಿಜೇತ ಪ್ರಮೋದ್ ರೈ ಪೆರುವಾಜೆ ಅವರಿಗೆ ಹುಟ್ಟೂರಿನಲ್ಲಿ ಅಭಿನಂದನೆ ಕಾರ್ಯಕ್ರಮ ಪೆರುವಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮೇ.27 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್, ಅಭಿವೃದ್ಧಿ ಅಧಿಕಾರಿ ತಿರುಮಲೇಶ್ವರ, ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಮಾಧವ ಮುಂಡಾಜೆ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಗುಲಾಬಿ ಶ್ರೀಮತಿ ರೇವತಿ ಮತ್ತು ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಗದೀಶ್ ರೈ ಪ್ರಮೋದ್ ರೈ ಅವರನ್ನು ಪರಿಚಯಿಸಿದರು.
ಈ ಕಾರ್ಯಕ್ರಮವನ್ನು ಸಚಿನ್ ರಾಜ್ ಶೆಟ್ಟಿ ಮತ್ತು ಜಗದೀಶ್ ರೈ ವ್ಯವಸ್ಥೆಗೊಳಿಸಿದರು.










