ನಾಗಪಟ್ಟಣ ವೆಂಟೆಡ್ ಡ್ಯಾಮ್ : 10 ಗೇಟು ತೆರೆದು ನೀರು ಹೊರ ಹರಿವು

0

ಸುಳ್ಯ‌ ನಾಗಪಟ್ಟಣದ ವೆಂಟೆಡ್ ಡ್ಯಾಂ ನ 10 ಗೇಟುಗಳನ್ನು ತೆಗೆದು ನೀರು ಹೊರ ಹರಿಯ ಬಿಡಲಾಗಿದೆ.

ಮೇ.30ರ ವರೆಗೆ ಡ್ಯಾಮ್ ನ 4 ಗೇಟುಗಳನ್ನು ಮಾತ್ರ ತೆಗೆಯಲಾಗಿತ್ತು. ನದಿ ನೀರಿನ ಮಟ್ಟ ಹೆಚ್ಚಾಗಿ ಸ್ಥಳೀಯರು ಆತಂಕದಲ್ಲಿದ್ದರು. ವಿಷಯ ತಿಳಿದು ನಾವು ತಹಶೀಲ್ದಾರ್ ರಲ್ಲಿಗೆ ಹೋಗಿ ಡ್ಯಾಮ್ ನ ಎಲ್ಲ ಗೇಟು ತೆಗೆಯಬೇಕೆಂದು ಕೇಳಿಕೊಂಡೆವು. ಇಂಜಿನಿಯರ್ ರಿಗೂ ಕರೆ ಮಾಡಿ‌ ವಿನಂತಿಸಿದ್ದೆವು. ಇದೀಗ 10 ಗೇಟುಗಳನ್ನು ತೆಗೆಯಲಾಗಿದೆ ಒಟ್ಟು 10 ಗೇಟು ತೆಗೆದು‌ನೀರು ಹೊರ ಹರಿಯ ಬಿಡಲಾಗಿದೆ ಎಂದು ತಾ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ.