ಸೋನಾ ಅಡ್ಕಾರಿಗೆ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ

0

ಬೆಂಗಳೂರಿನ ಸಂಗೀತನಾದ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 15ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸೋನ ಅಡ್ಕಾರು ಇವರಿಗೆ ಕರುನಾಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇವರು ಜಾಲ್ಸೂರು ಗ್ರಾಮದ ಶರತ್ ಅಡ್ಕಾರು ಮತ್ತು ಶೋಭಾ ಶರತ್ ದಂಪತಿಗಳ ಸುಪುತ್ರಿ. ಇವರು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ.