














ಸೇಫ್ ಡ್ರೈವ್- ಸೇವ್ ಲೈಫ್ (ಸುರಕ್ಷಿತ ಚಾಲನೆ ನಡೆಸಿ – ಜೀವ ಉಳಿಸಿ) ಎಂಬ ಧ್ಯೇಯದೊಂದಿಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸುಳ್ಯ ದಿಂದ ಮಡಿಕೇರಿ ವರೆಗೆ ಜೀಪು ರ್ಯಾಲಿ ಇಂದು (ಜೂ.1) ನಡೆಯಿತು. ಬೆಳಿಗ್ಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಸುಮಾರು 15 ಜೀಪುಗಳಲ್ಲಿ ಹೊರಟ ಈ ರ್ಯಾಲಿ ಕರಿಕೆ, ಭಾಗಮಂಡಲ, ಮಡಿಕೇರಿಯಾಗಿ ಪುನ: ಸುಳ್ಯಕ್ಕೆ ಹಿಂತಿರುಗಿತು.
ಸುಳ್ಯದ ಭಾರತ್ ಆಗ್ರೋ ಸಂಸ್ಥೆಯ ಮಾಲಕರಾದ ಪಿ.ರಾಮಚಂದ್ರರವರು ರ್ಯಾಲಿಗೆ ಚಾಲನೆ ನೀಡಿ ಶುಭ ಹಾರೈಸಿದರು. ರ್ಯಾಲಿಯಲ್ಲಿ ಶಂಭಯ್ಯ ಪಾರೆ, ಡಾ.ನಂದಕುಮಾರ್ ಬಿ., ಶ್ರಾವ್ಯ ಪಾರೆ, ವಿಹಾ ಪಾರೆ,ಜಯಂತ ಶಾಸ್ತ್ರಿ, ನಚಿಕೇತ,ಅಭಿರಾಮ, ಗಗನ್ ದೀಪ್, ರೋಹಿತ್, ಮಹಾಬಲ, ಧನುಷ್, ಜಾಕ್ ಫ್ರುಟ್ ಅನಿಲ್,ನಟೇಶ್, ಗೌರವ್, ರಾಜೇಶ್ವರಿ ಬಂಗಾರಡ್ಕ, ಆರ್ಯನ್, ವೆಂಕಟಕೃಷ್ಣ ಎದುರ್ಕಲ, ಅಜಯ್, ಅಭಯ್, ಸಮರ್ಥ ಮುಳಿಯ ಭಾಗವಹಿಸಿದ್ದರು










