ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನ 3 ನೇ ವರ್ಷದ ವರ್ಧಂತ್ಯುತ್ಸವ

0

ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನ ೩ ನೇ ವರ್ಷದ ವರ್ಧಂತ್ಯುತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ ನೆಡೆಯಿತು.
ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮರೋಲಿಯವರು ಅಧ್ಯಕ್ಷತೆ ವಹಿಸಿ , ಸ್ವಾಗತ ಮಾಡಿ ಪ್ರಸ್ತಾವನೆಗೈದರು. ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತಾಡುತ್ತಾ ಮುರುಳ್ಯದಲ್ಲಿ ನಾಲ್ಕಾರು ದೇವಸ್ಥಾನಗಳಿವೆ. ಕುಕ್ಕೆ ಕ್ಷೇತ್ರವು ಮನೆ ದೇವರು ಆಗಿದ್ದು. ಊರಿನವರ ಸಹಕಾರದಿಂದ ಗ್ರಾಮ ದೇವಸ್ಥಾನ ಆಗಿದೆ. ಊರಿನವರ ಶ್ರದ್ಧೆ ಸಹಕಾರ ಇದ್ದಲ್ಲಿ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗುತ್ತದೆ. ನಮ್ಮೆಲ್ಲರ ಮುತುವರ್ಜಿ ಮುಖ್ಯ ಎಂದು ಹೇಳಿದರು.


ವೇದಿಕೆಯಲ್ಲಿ ಕೇರ್ಪಡ ದೇವಸ್ಥಾನದ ನಿಕಟ ಪೂರ್ವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತನಡುಬೈಲು, ಕಾರ್ಯದರ್ಶಿ ವೆಂಕಪ್ಪ ಗೌಡ ಆಲಾಜೆ , ದೇವಳದ ಅನುವಂಶಿಕ ಆಡಳಿತದಾರ ಚಿನ್ನಯ್ಯ ಆಚಾರ್ಯ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ದನ ಆಚಾರ್ಯ, ಉತ್ಸವ ಸಮಿತಿ ಅಧ್ಯಕ್ಷ ಧೀರಜ್ ಮಾಲೆತ್ತಾರು , ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಧುಚಂದ್ರ ಆಚಾರ್ಯ ಪಂಜ, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಬಾಮೂಳೆ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷೆ ಸರೋಜಿನಿ ಆಚಾರ್ಯ, ಈಶ್ವರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಕು.ಭಾಗಿರಥಿ ಮುರುಳ್ಯ ಮನವಿ ಪತ್ರ ಬಿಡುಗಡೆಗೊಳಿಸಿದರು. ಶ್ರೀಮತಿ ಪ್ರಮೀಳಾ ಜನಾರ್ಧನ ಆಚಾರ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.

  • ಎ. ಸಂಕಪ್ಪ ಸಾಲಿಯಾನ್