ದರ್ಖಾಸ್ತು ಸ. ಹಿ. ಪ್ರಾ. ಶಾಲಾ ಪ್ರಾರಂಭೋತ್ಸವ – ಪ್ರಿಂಟರ್ ಕೊಡುಗೆ

0

ದರ್ಖಾಸ್ತು ಸ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜೂ.02 ರಂದು ನಡೆಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಹಳೆ ವಿದ್ಯಾರ್ಥಿ ವಸಂತ್ ಇವರು ಕೊಡುಗೆಯಾಗಿ ನೀಡಿದ ಡ್ರಾಯಿಂಗ್ ಪುಸ್ತಕ ಮತ್ತು ಕ್ರೇಯೋನ್ಸ್ ವಿತರಿಸಲಾಯಿತು.


ಸ್ಥಳೀಯರಾದ ಶ್ರೀಮತಿ ಸರಸ್ವತಿ ಮತ್ತು ಶಿವರಾಜ್ ಇವರು ಶಾಲೆಗೆ ಅತೀ ಅವಶ್ಯಕವಿರುವ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಣಿಕಂಠ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಪೋಷಕರು ಶಾಲಾ ಶಿಕ್ಷಕ ವೃಂದ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.