ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವರ್ಗಾವಣೆ ಕೌನ್ಸೆಲಿಂಗ್ ತಂತ್ರಾಂಶದಲ್ಲಿ ಜಿಲ್ಲೆಯ ಎಲ್ಲ ಖಾಲಿ ಹುದ್ದೆಗಳನ್ನು ತೋರಿಸದ ಕಾರಣ ಸ್ಥಳ ಆಯ್ಕೆಗೆ ಸಮಸ್ಯೆಯಾಗಿದೆ ಎಂದು ಸುಳ್ಯ ಸೇರಿದಂತೆ ಜಿಲ್ಲೆಯ ಹಲವು ಬೋಧಕೇತರ ನೌಕರರು ಜೂ.13ರಂದು ಕೌನ್ಸೆಲಿಂಗ್ ಬಹಿಷ್ಕರಿಸಿದ್ದಾರೆ.









ಸಮಸ್ಯೆ ಪರಿಹರಿಸಿ ಕೌನ್ಸೆಲಿಂಗ್ ನಡೆಸುವಂತೆ ಶಾಲಾ ಶಿಕ್ಷಣ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಹಿರಿಯ ಸಹಾಯಕ (ಎಫ್‌ಡಿಎ), ಕಿರಿಯ ಸಹಾಯಕ (ಎಸ್‌ಡಿಎ) ಹಾಗೂ ಗ್ರೂಪ್ ‘ಡಿ’ ಖಾಲಿ ಹುದ್ದೆಗಳನ್ನು ತಂತ್ರಾಂಶದಲ್ಲಿ ಪ್ರದರ್ಶಿಸಿಲ್ಲ. ಪಾರದರ್ಶಕವಾಗಿಲ್ಲ ದೂರಿದ್ದಾರೆ.
ಎಲ್ಲ ಬೋಧಕೇತರ ಹುದ್ದೆಗಳನ್ನು ಕೌನ್ಸೆಲಿಂಗ್ ಖಾಲಿ ತೋರಿಸದೆ ನಡೆಸುವುದುನಿಯಮಬಾಹಿರ. ಇದರಿಂದ ನೌಕರರಿಗೆ ತೊಂದರೆಯಾಗುತ್ತದೆ. ಎಲ್ಲ ಹುದ್ದೆ ತೋರಿಸಿದ ನಂತರ ಕೌನ್ಸೆಲಿಂಗ್ ನಡೆಸಿ ಸ್ಥಳ ಆಯ್ಕೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ.
ದಕ್ಷಿಣ ಕನ್ನಡ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದೇ ಸಮಸ್ಯೆಯಾಗಿದೆ. ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನುತೋರಿಸಿದರೆ ಕೆಲವರು ಆ ಸ್ಥಳ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಉದ್ದೇಶಪೂರ್ವಕವಾಗಿ ಹುದ್ದೆಗಳನ್ನು ತೋರಿಸಿಲ್ಲ ಎಂಬ ಅನುಮಾನ ನಮಗಿದೆ’ ಎಂದು ಸುಳ್ಯದ ಸರಕಾರಿ ನೌಕರರೊಬ್ಬರು ‘ಸುದ್ದಿ’ಗೆ ತಿಳಿಸಿದರು










