ಸಂಪಾಜೆ ಸಂಯುಕ್ತ ಪ.ಪೂ ಕಾಲೇಜಿನಲ್ಲಿ SSLC ಮತ್ತು PUC ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಹಾಗೂ ನೂಜಿಬೈಲು ಮೇಜರ್ ವೆಂಕಟರಾಮಯ್ಯ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಸಂಸ್ಥೆಯ ಎರಡು ತರಗತಿ ಕೊಠಡಿಗಳಿಗೆ ನೆಲಕ್ಕೆ ಟೈಲ್ಸ್ ಅಳವಡಿಸಿ ನವೀಕರಣಗೊಂಡ ತರಗತಿ ಕೊಠಡಿಗಳ ಉದ್ಗಾಟನಾ ಸಮಾರಂಭ ಜೂ. 5 ರಂದು ನಡೆಯಿತು.

ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಜಿ. ರಾಜರಾಮ ಕೀಲಾರು ಹಾಗೂ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕರಾದ ಕೊಂದಲಕಾಡು ನಾರಾಯಣ ಭಟ್ ಕೊಠಡಿಗಳ ಉದ್ಘಾಟನೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ 13 ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಶಿಕ್ಷಣಾಭಿಮಾನಿಗಳಾದ ರಮೇಶ್ ತಂಕಿಲ ನಿವೃತ್ತ ಮುಖ್ಯ ಮಹಾ ಪ್ರಂಬಂಧಕರು ನಬಾರ್ದ್ ಬೆಂಗಳೂರು, ಕೊಂದಲಕಾಡು ನಾರಾಯಣ ಭಟ್ ಎಂ. ಶಂಕರ ನಾರಾಯಣ ಭಟ್ ಎ. ಐತ್ತಪ್ಪ ಶ್ರೀ ಚನ್ನ ಬಸಪ್ಪ ಎಸ್ ಶ್ರೀಮತಿ ಶ್ರೀವಿದ್ಯಾ ಎಂ ಶ್ರೀಮತಿ ವಾಣಿ ಎನ್ ಎಸ್ ಶ್ರೀಮತಿ ಸಾಹಿತ್ಯ ರೈ .ಕೆ ಇವರು ನೀಡಿದ ನಗದು ಹಾಗೂ ಪ್ರೋತ್ಸಹಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.









ಬಳಿಕ ನಮ್ಮ ಸಂಸ್ಥೆಯ ಅಭಿವೃದ್ದಿಗಾಗಿ ದೇಣಿಗೆ ನೀಡಿದ ರಮೇಶ ತೆಂಕಿಲ, ಚಕ್ರಪಾಣಿ , ಕೊಂದಲಕಾಡು ನಾರಾಯಣ ಭಟ್ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಯು. ಬಿ ಚಕ್ರಪಾಣಿ ಸಂಚಾಲಕರಾದ ಎಂ. ಶಂಕರ ನಾರಾಯಣ ಭಟ್ , ಖಜಾಂಚಿ ಬಿ. ಆರ್. ಪದ್ಮಯ್ಯ ಕಾರ್ಯಕಾರಿ ಸಮಿತಿಯ ನಿರ್ದೇಶಕರಾದ ಕೆ.ಜಿ. ಮುರಳೀಧರ್ ಹಾಗೂ ಶ್ರೀ ಎಸ್.ಕೆ. ಹನೀಫ್ ಪ್ರಾಂಶುಪಾಲರು ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಲೋಕ್ಯಾನಾಯ್ಕ ರವರು ಅಭಿನಂದನಾ ಸಮಾರಂಭ ದ ಅತಿಥಿಗಳನ್ನು ಸ್ವಾಗತಿ, ಅಧ್ಯಾಪಕರಾದ ಹೆಚ್.ಜಿ.ಕುಮಾರ್ ನಿರೂಪಿಸಿ , ಮುಖ್ಯಶಿಕ್ಷಕರಾದ ಎ. ಐತ್ತಪ್ಪರವರ ಧನ್ಯವಾದಿಸಿದರು.










