ಅರಂತೋಡು ಮಲ್ಲಿಕಾ ಟ್ರೇಡರ್‍ಸ್ ಸ್ಥಳಾಂತರಗೊಂಡು ಶುಭಾರಂಭ

0

ಅರಂತೋಡು ಪಾನತ್ತಿಲ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಮಲ್ಲಿಕಾ ಟ್ರೇಡರ್‍ಸ್ ನಿತ್ಯಾನಂದ ಚೆನ್ನಡ್ಕರವರ ಮಾಲಕತ್ವದ ಮಲ್ಲಿಕಾ ಕಾಂಪ್ಲೆಕ್ಸ್‌ಗೆ ಜೂ. ೧೨ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.
ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಮೃದ್ಧಿ ಮಾರ್ಟ್‌ನ ಅಧ್ಯಕ್ಷ ದಯಾನಂದ ಕುರುಂಜಿ, ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಪ್ರಕಾಶ್ ಪಾನತ್ತಿಲ, ಕಿಶೋರ್ ಉಳುವಾರು, ಡಾ. ಲಕ್ಷ್ಮೀಶ್ ಕಲ್ಲುಮುಟ್ಲು, ಶಿವಾನಂದ ಕುಕ್ಕುಂಬಳ, ವಿನೋದ್ ಉಳುವಾರು, ಪುಷ್ಪಾ ಮೇದಪ್ಪ, ಪುರುಷೋತ್ತಮ ಉಳುವಾರು, ಕೆ.ಆರ್.ಗಂಗಾಧರ್, ಗೋಪಾಲ್ ಅಳಿಕೆ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಕಟ್ಟಡ ಮಾಲಕ ನಿತ್ಯಾನಂದ ಚೆನ್ನಡ್ಕ ಸ್ವಾಗತಿಸಿ, ವಂದಿಸಿದರು.
ಇಲ್ಲಿ ಕೃಷಿಕರಿಗೆ ಬೇಕಾದ ಹಾರ್ಡ್‌ವೇರ್, ರಬ್ಬರ್ ಸಲಕರಣೆಗಳು, ಸಿಮೆಂಟ್ ಶೀಟ್‌ಗಳು, ಪೈಂಟ್ಸ್ ಮೊದಲಾದವರುಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.