ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಸ್ವರ್ಣಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ತಂಬಿಲ ಹಾಗೂ ಸಂಕ್ರಮಣ ಪೂಜೆ ಜೂ. ೧೫ರಂದು ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಈ ಹಿಂದೆ ದೈವಾರಾಧನೆ ಮತ್ತು ಸಂಕ್ರಮಣ ಪೂಜೆ ಮಾತ್ರ ನಡೆಯುತ್ತಿದ್ದು, ನಂತರ ಸ್ವರ್ಣಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ರಕ್ತೇಶ್ವರಿ ಮಹಿಳಾ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ, ತಂಬಿಲ ಸೇವೆ, ದೀಪಾರಾಧನೆ, ಸಂಕ್ರಮಣ ಪೂಜೆಯು ನಡೆಯಿತು.
















ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಕೃಷ್ಣ ಕಾಮತ್, ಉಪಾಧ್ಯಕ್ಷ ಗಣೇಶ್ ಆಳ್ವ, ಸೇವಾ ಸಮಿತಿ ಮಾಜಿ ಅಧ್ಯಕ್ಷ ಶಶಿಧರ ಶೆಟ್ಟಿ ಪಡ್ಪು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಊರ ಹಾಗೂ ಪರವೂರ ಭಕ್ತಾದಿಗಳು ಇದ್ದರು.











