ಸುಳ್ಯ ಎನ್ನೆoಪಿಯುಸಿಯಲ್ಲಿ ಯೋಗ ದಿನಾಚರಣೆ

0


ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ಜೂನ್ 21ರಂದು ಹಮ್ಮಿಕೊಳ್ಳಲಾಗಿತ್ತು.

ಮನಸ್ಸಿನ ಏಕಾಗ್ರತೆ, ಅರೋಗ್ಯವಂತರಾಗಿರಲು ಅನುಸರಿಸಬೇಕಾದ ಧ್ಯಾನ, ಮುದ್ರಗಳನ್ನು ವಿದ್ಯಾರ್ಥಿಗಳಾದ ಜೀವನ್ ಪವಾರ್, ಅನಘ ಸೋನಾ,ಜೀವಿತ ಪಿ ಎಂ,ಒಲಿವಿಯ,ಮನ್ವಿತಾ,ಯಶವಂತ್, ಅಬೂಬಕರ್ ಶಮಾಜ್ ಪ್ರಾತ್ಯಕ್ಷಿಕೆ ಮೂಲಕ ನಡೆಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ಮಾತನಾಡಿ ಪ್ರಾಚೀನ ಹಿನ್ನಲೆ ಇರುವ ಯೋಗವನ್ನು ದೈನಂದಿನ ಅಭ್ಯಾಸ ಕ್ರಮವಾಗಿ ರೂಢಿಸಿಕೊಳ್ಳಬೇಕು. ಮಾನಸಿಕ, ದೈಹಿಕವಾಗಿ ನಾವು ಸದೃಢರಾಗಲು ಯೋಗ ಸಹಕಾರಿ ಎಂದರು. ವಿದ್ಯಾರ್ಥಿನಿ ಶ್ರೇಯ ಎಂ ಜಿ ನಿರೂಪಿಸಿ,ವಂದಿಸಿದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ,ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.