“ಆತ್ಮ ಮತ್ತು ದೇಹ, ಪ್ರಕೃತಿ ಮತ್ತು ಜೀವದ ಜೋಡಣೆಯೇ ಯೋಗ : ಡಾ. ದಾಮ್ಲೆ

“ಯೋಗ ಎಂಬುದು ‘ಯುಜ್’ ಎಂಬ ಸಂಸ್ಕೃತ ಪದದಿಂದ ಬಂದಿದೆ. ‘ಯುಜ್’ ಎಂದರೆ ಜೋಡಿಸುವುದು ಎಂದರ್ಥ. ಅಂದರೆ ಆತ್ಮ ಮತ್ತು ದೇಹ ಹಾಗೂ ಪ್ರಕೃತಿ ಮತ್ತು ಜೀವದ ಜೋಡಣೆ ಯೋಗದಿಂದ ಸಾಧ್ಯ. ಮನುಷ್ಯನಿಗೆ ಆಹಾರ ಮತ್ತು ಆರೋಗ್ಯ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಸುಲಭ ವಿಧಾನ. ಪ್ರಕೃತಿಯಲ್ಲಿಯೇ ಒಂದು ರೀತಿಯ ರಕ್ಷಣಾತ್ಮಕ ವ್ಯೂಹ ಇದೆ. ಆ ಕ್ರಮವನ್ನು ಗೌರವಿಸಬೇಕು. ಅದನ್ನು ಗೌರವಿಸುವ ಉದ್ದೇಶವೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರು ಹೇಳಿದರು.
ಅವರು ಜೂನ್ 21ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.









ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗಣಿತಜ್ಞರಾದ ವಿ. ಎಸ್. ಎಸ್. ಶಾಸ್ತ್ರಿ ಅವರು ಮಾತನಾಡಿ “ಯೋಗ: ಚಿತ್ತವೃತ್ತಿ ನಿರೋಧ:” ಅಂದರೆ ಅನಿಯಂತ್ರಿತ ಮನಸ್ಸನ್ನು ನಿಯಂತ್ರಣಕ್ಕೆ ತರಲು ಯೋಗದಿಂದ ಸಾಧ್ಯ, ಔಷಧಿಯಿಂದ ನಿವಾರಿಸಲು ಸಾಧ್ಯವಾಗದ ಅದೆಷ್ಟೋ ಕಾಯಿಲೆಗಳು ಯೋಗದಿಂದ ನಿವಾರಣೆಯಾಗುತ್ತವೆ” ಎಂದರು. ಮೈಸೂರಿನ ಕೃಷ್ಣಮಾಚಾರ್ ಶ್ರೀನಿವಾಸ್ ಅಯ್ಯಂಗಾರ್ ಅವರು ಮೊದಲು ಯೋಗವನ್ನು ವಿಶ್ವದಾದ್ಯಂತ ಪರಿಚಯಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ವಿಜೇತಾ ಪಿ. ವಂದಿಸಿದರು. ಶಿಕ್ಷಕ ದೇವಿಪ್ರಸಾದ ಜಿ. ಸಿ ನಿರೂಪಿಸಿದರು.
ಬಳಿಕ ಡಾ. ಚಂದ್ರಶೇಖರ ದಾಮ್ಲೆಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಜೊತೆಗೆ ಶಾಲಾ ಆವರಣದಲ್ಲಿ ದೊರೆಯುವ ವಿವಿಧ ಬಗೆಯ ಔಷಧೀಯ ಸಸ್ಯಗಳಿಂದ ತಯಾರಿಸಿದ ಕಷಾಯವನ್ನು ವಿತರಿಸಲಾಯಿತು.










