ಆಶಾ ಕಾರ್ಯಕರ್ತೆ ಯಮುನಾ ಸೂಡ್ಲು ನಿವೃತ್ತಿ

0

ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಾಡಿಯ ಬಿಳಿನೆಲೆ ಉಪಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಮುನಾ ಸೂಡ್ಲು ನಿವೃತ್ತಿ ಹೊಂದಿದ್ದಾರೆ.

ಇವರು ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ ನಂತರ 3 ವರ್ಷಗಳ ಕಾಲ ಪುತ್ತೂರಿನ ಪ್ರತಿಮಾ ನರ್ಸಿಂಗ್ ಹೋಮ್, 6 ವರ್ಷಗಳ ಕಾಲ ಮಂಗಳೂರಿನ ಬೋಳೂರು ನರ್ಸಿಂಗ್ ಹೋಮ್ ನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ವಿವಾಹವಾದ ನಂತರ 2010 ರಿಂದ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದರು.

ಇವರು ಕಡಬ ತಾಲ್ಲೂಕಿನ ಬಿಳಿನೆಲೆ ಗ್ರಾಮದ ಸೂಡ್ಲು ಧರ್ಮಪಾಲ ಗೌಡ ಇವರ ಧರ್ಮಪತ್ನಿ.