ಶ್ರೀ ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿ ಸುಳ್ಯ ಇದರ 44 ನೇ ವರ್ಷದ ಯಕ್ಷಗಾನ ತರಬೇತಿ ಇತ್ತೀಚೆಗೆ ಸುಳ್ಯದ ಶ್ರೀ ಚೆನ್ನಕೇಶವ ದೇವಳದ ರಾಜಗೋಪುರದಲ್ಲಿ ಆರಂಭಗೊಂಡಿತು.
ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಎಂ.ಡಿ. ರವೀಂದ್ರ ಉದ್ಘಾಟನೆ ನೆರವೇರಿಸಿದರು. ನರೇನ್ ಪ್ರಭು ಕಾಂತಮಂಗಲ ಮುಖ್ಯ ಅತಿಥಿಗಳಾಗಿದ್ದರು.









ಯಕ್ಷ ಗುರು ಕೋಡ್ಲ ಗಣಪತಿ ಭಟ್ ಸ್ವಾಗತಿಸಿ ವಂದಿಸಿದರು.
ಪ್ರತಿ ಭಾನುವಾರ ಶ್ರೀ ದೇವಳದಲ್ಲಿ ಬೆಳಿಗ್ಗೆ 9.30 ರಿಂದ ತರಬೇತಿ ನಡೆಯಲಿದೆ.










