ನಾರ್ಣಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟು ಪುಸ್ತಕ, ಬ್ಯಾಗು ಹಾಗು ಲೇಖನ ಸಾಮಗ್ರಿಗಳನ್ನು ಜೂ. 21ರಂದು ವಿತರಿಸಲಾಯಿತು.









ಬೆಂಗಳೂರಿನ ಟೆಕ್ಸಸ್ ಇನ್ಸುಮೆಂಟ್ಸ್ ಸಂಸ್ಥೆಯವರು ಈ ಕೊಡುಗೆಯನ್ನು ನೀಡಿದ್ದು, ಸಂಸ್ಥೆಯ ಉದ್ಯೋಗಿ ಆಶುತೋಶ್ ಮಿಶ್ರಾರವರು ಶಾಲೆಗೆ ಬಂದು ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಾಮಗ್ರಿಗಳನ್ನು ವಿತರಿಸಿದರು. ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.










