ಚೆನ್ನಕೇಶವ ವಾಲ್ತಾಜೆಯವರಿಗೆ – ಶ್ರದ್ದಾಂಜಲಿ ಸಭೆ – ನುಡಿನಮನ

0

ಮೃತರ ಸ್ಮರಣಾರ್ಥ ಮಡಪ್ಪಾಡಿ ಶಾಲೆಯಲ್ಲಿ ದತ್ತಿನಿಧಿ ಸ್ಥಾಪನೆ

ಬದುಕಿನಲ್ಲಿ ಯಾರಿಗೂ ನೋವು ನೀಡದ ಸಹೃದಯಿ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ : ಭರತ್ ಮುಂಡೋಡಿ

ಚೆನ್ನಕೇಶವ ವಾಲ್ತಾಜೆಯವರು ಯಾರಿಗೂ ನೋವು ನೀಡಿದವರಲ್ಲ. ತನ್ನ ಬದುಕಿನಲ್ಲಿ ಅಂದಿನಿಂದ ಇಂದಿನವರೆಗೆ ಎಲ್ಲರ ಜೊತೆ ಅತ್ಯುತ್ತಮ ಬಾಂದವ್ಯ ಹೊಂದಿದವರಗಿದ್ದರು. ತನ್ನ ಕುಟುಂಬ ಹಾಗೂ ಸಮಾಜಕ್ಕಾಗಿ ದುಡಿದ ಸಹೃದಯಿ ಹಿರಿಯರೊಬ್ಬರನ್ನು ಕಳೆದುಕೊಂಡಿದ್ದೇವೆ ಎಂದು ಮುಖಂಡ ಭಾರತ್ ಮುಂಡೋಡಿ ಹೇಳಿದರು. ಅವರು ಚೆನ್ನಕೇಶವ ವಾಲ್ತಾಜೆಯವಯರಿಗೆ ನುಡಿ ನಮನ ಸಲ್ಲಿಸಿದರು.

ಜೂ.11ರಂದು ನಿಧನರಾದ ಚೆನ್ನಕೇಶವ ಗೌಡ ವಾಲ್ತಾಜೆಯವರ ವೈಕುಂಠ ಸಮಾರಾಧನೆ ಮತ್ತು ಶ್ರದ್ದಾಂಜಲಿ ಸಭೆಯು ಇಂದು (ಜೂ. 27) ಗುತ್ತಿಗಾರಿನ ದೇವಿ ಸಿಟಿ ಸಭಾಂಗಣದಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ಗದಾಧರ ಮಲ್ಲಾರ ಮೃತರ ಬಗ್ಗೆ ಗುಣಗಾನ ಗೈದರು.

ಮೃತರ ಸ್ಮರಣಾರ್ಥ ಡಿ. ಆರ್. ಉದಯಕುಮಾರ್ ದೇರಪ್ಪಜ್ಜನಮನೆ, ಡಿ. ಪಿ. ಶಶಿಕಲಾ ದೇರಪ್ಪಜ್ಜನಮನೆ, ಸಿ. ಎಚ್. ಶಿವರಾಮ ಗೌಡ ಚಿಲ್ತಡ್ಕ, ಬಾಲಕೃಷ್ಣ ಉಷಾ ಸ್ಟುಡಿಯೋ ಗುತ್ತಿಗಾರು ಹಾಗೂ ಯಂ. ಕೆ. ಮೋಹನ ಕುಮಾರ್ ಮತ್ತಾರಿ ಮನೆ ಗುತ್ತಿಗಾರು ರವರು ಒಟ್ಟು ಗೊಡಿಸಿದ ಮೊತ್ತವನ್ನು ಚೆನ್ನಕೇಶವ ವಾಲ್ತಾಜೆಯವರ ಸ್ಮರಣಾರ್ಥ ದತ್ತಿ ನಿಧಿ ಸ್ಥಾಪಿಸಲಾಯಿತು. ಇದರ ಬಡ್ಡಿಯಿಂದ ಬರುವ ಮೊತ್ತವನ್ನು ಮಡಪ್ಪಾಡಿ ಶಾಲೆಯ 6ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಓರ್ವ ವಿದ್ಯಾರ್ಥಿ/ನಿ ಗೆ ಆ. 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಹುಮಾನವಾಗಿ ನೀಡಲಾಗುವುದು. ಈ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮವು ಇಂದು ನಡೆಯಿತು.

ಶ್ರದ್ದಾಂಜಲಿ ಸಭೆಯಲ್ಲಿ ಮನೆಯವರು, ಅವರ ಬಂಧು ಮಿತ್ರರು, ಊರಿನ ಪ್ರಮುಖರು ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಶ್ರದ್ದಾಂಜಲಿ ಅರ್ಪಿಸಿದರು.