ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 4 ಕಾಲು ಸಂಕ ನಿರ್ಮಾಣ – 1 ಕೋಟಿ ರೂ ಮಂಜೂರು : ಶಾಸಕಿ ಭಾಗೀರಥಿ ಮುರುಳ್ಯ

0

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 4 ಕಡೆ ಕಾಲು ಸಂಕ ನಿರ್ಮಾಣಕ್ಕೆ ಸರಕಾರದಿಂದ ರೂ.1 ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಎಡಮಂಗಲ ಗ್ರಾಮದ ರಥಬೀದಿ ಅಳಕೆ ನಡುಬೈಲು ರಸ್ತೆಯ ಅಳಕೆ ಎಂಬಲ್ಲಿ ಕಾಲು ಸಂಕ ರೂ.25 ಲಕ್ಷ. ಜಾಲ್ಸೂರು ಗ್ರಾಮದ ಗಬ್ಬಲಡ್ಕ ವಿನೋಬಾನಗರ ರಸ್ತೆಯ ಗಬಲಡ್ಕ ಎಂಬಲ್ಲಿ ಕಾಲು ಸಂಕ ರೂ.20 ಲಕ್ಷ.
ಮರ್ಕಂಜ ಗ್ರಾಮದ ಪುರ ಸಿರಿಪ್ರಸಾದ್ ಬಳಿ ಕಿರು ಸೇತುವೆ ರೂ.20 ಲಕ್ಷ.

ನೂಜಿಬಾಳ್ತಿಲ ಗ್ರಾಮದ ರೆಂಜಲಾಡಿ – ನೂಜಿ ರಸ್ತೆಯ ನೂಜಿ ಉಳ್ಳಾಲ್ತಿ ದೇವಸ್ಥಾನದ ಬಳಿ ಕಾಲು ಸಂಕ ರಚನೆ ರೂ.35 ಲಕ್ಷ ಮಂಜೂರುಗೊಂಡಿದೆ ಎಂದವರು ವಿವರ ನೀಡಿದ್ದಾರೆ.