ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಹೂವಪ್ಪ ಗೌಡ ಬೂದಿಪಳ್ಳರವರು ಸುದೀರ್ಘ 42 ವರ್ಷಗಳ ಕಾಲ ಸೇವೆ ಸಲ್ಲಿಸಿ ಜೂ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
1984 ರಲ್ಲಿ ಏನೆಕಲ್ಲು ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಬಿಲ್ಲು ಸಂಗ್ರಾಹಕರಾಗಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯಕ್ಕೆ ಸೇರಿ ನಂತರ ಸುಬ್ರಹ್ಮಣ್ಯ ಮಂಡಲ ಪಂಚಾಯತ್ ಹಾಗೂ ನಂತರ ಅಸ್ತಿತ್ವಕ್ಕೆ ಬಂದ ಗ್ರಾಮ ಪಂಚಾಯತ್ ನಲ್ಲಿ ಸುಮಾರು 12 ವರ್ಷಗಳವರೆಗೆ ಕರ್ತವ್ಯ ನಿರ್ವಹಿಸಿರುತ್ತಾರೆ.








ದಿನಾಂಕ.6.6.1998 ರಂದು ದ್ವಿತೀಯ ದರ್ಜೆ ಕಾರ್ಯದರ್ಶಿಯಾಗಿ ಪ್ರಥಮವಾಗಿ ಪುತ್ತೂರು ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯಕ್ಕೆ ಹಾಜರಾದರು.ಸುಮಾರು ಏಳು ವರ್ಷಗಳ ಕಾಲ ಅಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಬಡಗನ್ನೂರು ಗ್ರಾಮ ಪಂಚಾಯತ್ ನಲ್ಲಿ 4 ವರ್ಷ ಸೇವೆ ಸಲ್ಲಿಸಿ,ನಂತರ ಗ್ರೇಡ್ 1 ಕಾರ್ಯದರ್ಶಿಯಾಗಿ ಪದೋನ್ನತಿಗೊಂಡು ಮಂಗಳೂರು ತಾಲೂಕಿನ ಗಂಜೀಮಠ ಗ್ರಾಮ ಪಂಚಾಯತ್ ನಲ್ಲಿ 3 ತಿಂಗಳು ಕರ್ತವ್ಯ ನಿರ್ವಹಿಸಿ ಬಳಿಕ ಅಮರಮುಡ್ನೂರು ಗ್ರಾಮ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿರುತ್ತಾರೆ.ಇದರೊಂದಿಗೆ ಕಲ್ಮಡ್ಕ,ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಕರ್ತವ್ಯ ನಿರ್ವಹಿಸಿದ್ದಾರೆ.2012 ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಭಡ್ತಿಗೊಂಡು ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ 9 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತಾರೆ.ಇದರೊಂದಿಗೆ ಪ್ರಭಾರ ಸೇವೆಯಲ್ಲಿ ನೆಲ್ಲೂರು ಕೆಮ್ರಾಜೆ,ಮರ್ಕಂಜ,ಜಾಲ್ಸೂರು ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.
19-8-2021 ರಿಂದ ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜೂ.30 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ಪ್ರೌಢಶಾಲೆಯನ್ನು ಮಂಗಳೂರಿನ ಪದುವ ಹೈಸ್ಕೂಲಿನಲ್ಲಿ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಎಸ್.ಎಸ್.ಪಿ.ಯು.ಕಾಲೇಜು ಸುಬ್ರಹ್ಮಣ್ಯದಲ್ಲಿ ಪೂರೈಸಿರುತ್ತಾರೆ.
ಕಡಬ ತಾಲೂಕು ಏನೆಕಲ್ಲು ಗ್ರಾಮದ ಬೂದಿಪಳ್ಳ ಮನೆ ನಾಗಪ್ಪ ಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರನಾದ ಇವರ ಪತ್ನಿ ಶ್ರೀಮತಿ ಲಕ್ಷ್ಮೀ ಗೃಹಿಣಿಯಾಗಿದ್ದಾರೆ.
ಪುತ್ರಿ ಶ್ರೀಮತಿ ರಕ್ಷಾ ದಿಲೀಪ್ ಬಿಸಿಎ,ಎಂಎಸ್ಸಿ ಮಾಡಿ ಬೆಂಗಳೂರಿನ ಚರಣ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.
ಅಳಿಯ ದಿಲೀಪ್ ಬೆಂಗಳೂರಿನ ಕೆ.ಎಲ್.ಬಿ.ಇನ್ಟ್ರೂಮೆಂಟ್ಸ್ ಕೊ.ಪ್ರೈ.ಲಿ.ನಲ್ಲಿ ಎಡ್ಮಿನಿಸ್ಟ್ರೇಟಿವ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ನೋರ್ವ ಪುತ್ರಿ ದೀಕ್ಷಾರವರು ಬೆಂಗಳೂರಿನಲ್ಲಿ ಸಿ.ಎ.ಮಾಡುತ್ತಿದ್ದಾರೆ.










