














ಸುಳ್ಯ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲರವರು ಜೂ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಸುದೀರ್ಘ 39 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಇವರು ನಿವೃತ್ತರಾಗುತ್ತಿದ್ದಾರೆ.
1986 ರಿಂದ ಕಿರಿಯ ತರಬೇತಿ ಅಧಿಕಾರಿಯಾಗಿ ಸೇವೆಗೆ ಸೇರಿದ ಇವರು ಬಳಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು
1995 ರಿಂದ ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿದರು.
ಇವರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಬಾಳಿಲ ವಿದ್ಯಾಬೋಧಿನಿಯಲ್ಲಿ ,ಪಿಯುಸಿ ಶಿಕ್ಷಣವನ್ನು ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪೂರೈಸಿದರು.
ಬಳಿಕ ಮಂಗಳೂರು ಕೆಪಿಟಿಯಲ್ಲಿ ಡಿಪ್ಲೋಮಾ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.
ಇವರ ಪತ್ನಿ ಶ್ರೀಮತಿ ವೇದಾವತಿಯವರು ಗೃಹಿಣಿಯಾಗಿದ್ದಾರೆ.
ಪುತ್ರ ಕಾರ್ತಿಕ್ ಕಾರ್ಕಳದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ಪುತ್ರಿ ಶರಣ್ಯ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್.ಮಾಡಿ ಬಳ್ಳಾರಿಯಲ್ಲಿ ಎಂ.ಎಸ್.ಮಾಡುತ್ತಿದ್ದಾರೆ.










