ಕೊಲ್ಲಮೊಗ್ರು ಹರಿಹರ ಪ್ರಾ. ಕೃ.ಪ. ಸ.ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ನಿವೃತ್ತಿ

0

ಕೊಲ್ಲಮೊಗ್ರು ಹರಿಹರ ಪ್ರಾ. ಕೃ.ಪ. ಸ.ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಜೂ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

1/01/1985 ರಲ್ಲಿ ಹಂಗಾಮಿ ಗುಮಾಸ್ತರಾಗಿ ಕರ್ತವ್ಯಕ್ಕೆ ಸೇರಿದ ಇವರು 1/07/1985 ರಂದು ಕ್ಲರ್ಕ್ ಆಗಿ ಖಾಯಂಗೊಂಡರು . ಬಾಳುಗೋಡು, ಹರಿಹರ, ಕಲ್ಮಕಾರು ಗಳಲ್ಲಿ ಕೆಲಸ ಮಾಡಿದ ಇವರು ರೇಷನ್, ದಿನಸಿ, ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡಿದ್ದರು. 1/01/2015 ರಲ್ಲಿ ಸಹಾಯಕ ಕಾರ್ಯನಿರ್ವಾಹಣಾಧಿಕಾರಿಯಾಗಿ ಭಡ್ತಿಗೊಂಡು ಕೊಲ್ಲಮೊಗ್ರು ಶಾಖೆಯ ಬ್ರಾಂಚ್ ಮೆನೇಜರ್ ಆದರು. 1/06/2022 ರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸುಧೀರ್ಘ 40 ವರ್ಷ ಆರು ತಿಂಗಳು ಕಾಲ ಸೇವೆ ಸಲ್ಲಿಸಿದ್ದಾರೆ.
ಇವರು ತಮ್ಮ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ವಳಲಂಬೆ ಕಿ.ಪ್ರಾ.ಶಾಲೆಯಲ್ಲಿ, 5 ರಿಂದ 10 ನೇ ತರಗತಿವರೆಗೆ ಗುತ್ತಿಗಾರಿನಲ್ಲಿ ಶಿಕ್ಷಣ ಪಡೆದರು. ಪದವಿ ಪೂರ್ವ ಶಿಕ್ಷಣವನ್ನು ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಪಡೆದು. ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪ್ರಥಮ ಕಲಾ ಪದವಿ ಪಡೆದರು. ಅದೇ ವರ್ಷ ಎರಡು ತಿಂಗಳು ಕಾಲ ಇದೇ ಸಂಸ್ಥೆಯಲ್ಲಿ ಸಾಲದ ಅರ್ಜಿ ಬರೆಯುವ ಕೆಲಸವನ್ನು ಮಾಡಿದ್ದರು.

ಕೊಲ್ಲಮೊಗ್ರು ಗ್ರಾಮದ ನಿವಾಸಿಯಾಗಿರುವ ಇವರು
ಮೂಲತಹ ಗುತ್ತಿಗಾರು ಗ್ರಾಮದ ಮಣಿಯಾನ ಮನೆ ದಿl ವೆಂಕಪ್ಪ ಮತ್ತು ದಿl ಲಕ್ಷ್ಮೀ ದಂಪತಿಗಳ ಪುತ್ರರಾದ ಇವರ ತಂದೆ ವೆಂಕಪ್ಪ ಗೌಡ ಮಂಡಲ ಪಂಚಾಯತ್ ಸದಸ್ಯರಾಗಿದ್ದವರು. ಅನಂತರಾಮ ಅವರ ಪತ್ನಿ ಶ್ರೀಮತಿ ಉಷಾ ಗೃಹಣಿಯಾಗಿದ್ದಾರೆ. ಪುತ್ರ ಸೃಜನ್ ಎಂ.ಎ. ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ಮಾಡುತಿದ್ದಾರೆ. ಮತ್ತೋರ್ವ ಪುತ್ರ ಕೀರ್ತನ್ ಎಂ.ಎ, ಎಂ.ಕಾಂ ಪದವೀಧರ.

ಕರ್ತವ್ಯದೊಂದಿಗೆ ಇತರೇ ಸಂಘಟನೆಯಲ್ಲಿ ತೊಡಗಿಕೊಂಡಿರುವ ಇವರು ದ.ಕ ಜಿಲ್ಲಾ ಸಹಕಾರಿ ನೌಕರರ ಸಂಘದ ನಿರ್ದೇಶಕರಾಗಿ, ಮಹಾತ್ಮಾ ಯುವಕ ಮಂಡಲ ಕೊಲ್ಲಮೊಗ್ರು ಇದರ ಕಾರ್ಯದರ್ಶಿಯಾಗಿ, ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇದರ ಸ್ಥಾಪಕ ಕಾರ್ಯದರ್ಶಿಯಾಗಿ, ತಂಬಿನಡ್ಕ ಗೆಳೆಯರ ಬಳಗ ಇದರ ಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕೊಲ್ಲಮೊಗ್ರು ಗೌಡ ಗ್ರಾಮ ಸಮಿತಿ ಸಂಚಾಲಕರಾಗಿ, ಗಡಿಕಲ್ಲು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಗುಳಿಗರಾಜ ಸೇವಾ ಸಮಿತಿ ಕಟ್ಡ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.