ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ 14 ವಿದ್ಯಾರ್ಥಿಗಳು ಕಬಡ್ಡಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಸಿ ಐ ಎಸ್ ಸಿ ನ್ಯಾಷನಲ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ 2025-26ರ ಮೊದಲ ಹಂತದ ದಕ್ಷಿಣ ಕನ್ನಡ ಹಾಗೂ ಉಡುಪಿ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯು ಜುಲೈ 2 ರಂದು ಶ್ರೀ ಸಿದ್ಧಿ ವಿನಾಯಕ ರೆಸಿಡೆನ್ಸಿಯಲ್ ಸ್ಕೂಲ್ ಕುಂದಾಪುರದಲ್ಲಿ ಜರುಗಿದ್ದು ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದು 14ರ ವಯೋಮಿತಿಯ ಹುಡುಗಿಯರ ಮತ್ತು ಹುಡುಗರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ.

17ರ ವಯೋಮಿತಿಯ ಹುಡುಗರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದ್ದು ಹಾಗೂ ಹುಡುಗಿಯರ ವಿಭಾಗವು ತೃತೀಯ ಸ್ಥಾನವನ್ನು ಪಡೆದಿದೆ.
ಹುಡುಗಿಯರ ವಿಭಾಗದ 17ರ ವಯೋಮಿತಿಯ ಕಬಡ್ಡಿ ಸ್ಪರ್ಧೆಯಲ್ಲಿ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಜಾನ್ವಿ.ಬಿ. ರೈ, ಫಾತಿಮಾತ್ ರಿಷಾ ಟಿ.ಎ ಹಾಗೂ ಹಾಗೂ ಹುಡುಗರ ವಿಭಾಗದಲ್ಲಿ 10ನೇ ತರಗತಿಯ ಸಂಪ್ರೀತ್ ಹೆಚ್ ವೈ, ಧನ್ವಿತ್ ಕುಮಾರ್ ಓ ಬಿ, ಅಬ್ದುಲ್ಲಹಿ ನದೀಮ್ ಪಿ ಎ, ಮೊಹಮ್ಮದ್ ರಿಜ್ವಾನ್ ಎಸ್ ಎ ಹಾಗೂ 14ರ ವಯೋಮಿತಿಯ ಹುಡುಗಿಯರ ವಿಭಾಗದಲ್ಲಿ ಎಂಟನೇ ತರಗತಿಯ ಜಿಷಾ ಪೇರಲ್ ಎನ್ ಮತ್ತು ಸಾನಿಧ್ಯ ಎನ್ ವೈ ಏಳನೇ ತರಗತಿಯ ಮಾನ್ಯತಾ ಪವನ್ ಯು 6ನೇ ತರಗತಿಯ ಲಿಶ್ವಿ ಡಿ ಬಿ ಹಾಗೂ ಹುಡುಗರ ತಂಡದಲ್ಲಿ ಎಂಟನೇ ತರಗತಿಯ ಆತ್ಮಿಕ್ ಸಿ ಜಿ , ಹರ್ಷಿಕ್ ಪಿ , ಹೇಮಂತ್ ಎಚ್ ಆರ್ ಮತ್ತು ಏಳನೇ ತರಗತಿಯ ಸಮೃದ್ಧ ಡಿ ರೈ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿರುತ್ತಾರೆ.